ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ l ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ನೌಕಾಪಡೆ (Indian Navy) ಫೆಬ್ರವರಿ 2025ರಲ್ಲಿ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, 270 SSC ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಮುದಾಯದಲ್ಲಿ ಗೌರವಯುತ ಮತ್ತು ಉನ್ನತ ಭವಿಷ್ಯವನ್ನು ಹೊಂದಲು ಆಸಕ್ತರಾಗಿರುವ ಎಲ್ಲಾ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಹುದ್ದೆಯ ವಿವರ :
ಸಂಸ್ಥೆಯ ಹೆಸರು : ಭಾರತೀಯ ನೌಕಾಪಡೆ (Indian Navy)
ಹುದ್ದೆಗಳ ಸಂಖ್ಯೆ : 270
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಹುದ್ದೆಯ ಹೆಸರು : SSC ಆಫೀಸರ್
ಹುದ್ದೆಗಳ ವಿವರ :
ಎಕ್ಸಿಕ್ಯೂಟಿವ್ ಬ್ರಾಂಚ್ - 60
ಪೈಲಟ್ - 26
ನೌಕಾ ವಿಮಾನ ಕಾರ್ಯಾಚರಣಾ ಅಧಿಕಾರಿ - 22
ಏರ್ ಟ್ರಾಫಿಕ್ ಕಂಟ್ರೋಲರ್ (ATC) - 18
ಲಾಜಿಸ್ಟಿಕ್ಸ್ - 28
ಶಿಕ್ಷಣ - 15
ಎಂಜಿನಿಯರಿಂಗ್ ಬ್ರಾಂಚ್ [ಜನೆರಲ್ ಸರ್ವೀಸ್ – (GS)] - 38
ಎಲೆಕ್ಟ್ರಿಕಲ್ ಬ್ರಾಂಚ್ [ಜನೆರಲ್ ಸರ್ವೀಸ್ – (GS)] - 45
ನೌಕಾ ವಿನ್ಯಾಸಕ (Naval Constructor) - 18
ವೇತನ ಶ್ರೇಣಿ:
- ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 1,10,000/- ರೂ ಗಳ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.
ಅರ್ಹತಾ ವಿವರ :
- ಎಕ್ಸಿಕ್ಯೂಟಿವ್ ಬ್ರಾಂಚ್ ಹುದ್ದೆಗೆ : B.E ಅಥವಾ B.Tech |
- ಪೈಲಟ್, ನೌಕಾ ವಿಮಾನ ಕಾರ್ಯಾಚರಣಾ ಅಧಿಕಾರಿ, ATC, ಲಾಜಿಸ್ಟಿಕ್ಸ್ ಹುದ್ದೆಗಳಿಗೆ : B.Sc, B.Com, B.E ಅಥವಾ B.Tech, MBA, MCA, M.Sc |
- ಶಿಕ್ಷಣ ಹುದ್ದೆಗೆ : B.E ಅಥವಾ B.Tech, M.Tech, M.Sc |
- ಎಂಜಿನಿಯರಿಂಗ್ ಬ್ರಾಂಚ್ (GS) ಹುದ್ದೆಗೆ B.E ಅಥವಾ B.Tech |
- ಎಲೆಕ್ಟ್ರಿಕಲ್ ಬ್ರಾಂಚ್ (GS), ನೌಕಾ ವಿನ್ಯಾಸಕ ಹುದ್ದೆಗೆ B.E ಅಥವಾ B.Tech |
ವಯೋಮಿತಿ:
- ಭಾರತೀಯ ನೌಕಾಪಡೆ ನಿಯಮಾವಳಿಗಳ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಅರ್ಜಿಶುಲ್ಕ:
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ:
- ಮೆರಿಟ್ ಪಟ್ಟಿ ಮತ್ತು ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಆರಂಭ ದಿನಾಂಕ : 08-02-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-02-2025
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ತಕ್ಷಣವೇ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಇನ್ನಷ್ಟು ಮಾಹಿತಿಗಾಗಿ, ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.
ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಿ ಮತ್ತು ನೌಕಾಪಡೆಯಿಂದ ಗೌರವಯುತ ಸೇವೆಗೆ ಸೇರ್ಪಡೆಯಾಗುವ ಅವಕಾಶ ಪಡೆಯಿರಿ.
Comments