ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI) ದಲ್ಲಿ ಖಾಲಿ ಇರುವ 650 ಹುದ್ದೆಗಳ ಭರ್ಜರಿ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ ಬ್ಯಾಂಕ್) 2025-26ನೇ ಸಾಲಿನ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಗ್ರೇಡ್ 'O') ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 650 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025 ಮಾರ್ಚ್ 1ರಿಂದ ಮಾರ್ಚ್ 12ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
- ಹುದ್ದೆಯ ಹೆಸರು : ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್
- ಒಟ್ಟು ಹುದ್ದೆಗಳು : 650
ಅರ್ಜಿ ಶುಲ್ಕ :
- ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳು: ರೂ. 250/- ಶುಲ್ಕ)
- ಇತರೆ ಎಲ್ಲಾ ಅಭ್ಯರ್ಥಿಗಳು: ರೂ. 1050/- ಅರ್ಜಿ ಶುಲ್ಕ
ಪ್ರಮುಖ ದಿನಾಂಕಗಳು :
- ಆನ್‌ಲೈನ್ ಅರ್ಜಿ ಸಲ್ಲಿಸುವ ಆರಂಭ ದಿನಾಂಕ : 2025 ಮಾರ್ಚ್ 1
- ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 2025 ಮಾರ್ಚ್ 12
- ಆನ್‌ಲೈನ್ ಪರೀಕ್ಷೆಯ ದಿನಾಂಕ : 2025 ಏಪ್ರಿಲ್ 6
ವಯೋಮಿತಿ :
- ಕನಿಷ್ಠ ವಯಸ್ಸು : 20 ವರ್ಷ
- ಗರಿಷ್ಠ ವಯಸ್ಸು : 25 ವರ್ಷ
- ವಯೋಸಡಿಲಣೆ : ನಿಯಮಾನುಸಾರ ಅನ್ವಯಿಸುತ್ತದೆ.
ಶೈಕ್ಷಣಿಕ ಅರ್ಹತೆ :
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಸಲು, ಐಡಿಬಿಐ ಬ್ಯಾಂಕ್ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.
Comments