ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Bhagya R K | Date:4 ಎಪ್ರಿಲ್ 2025
not found

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) 2025ನೇ ಸಾಲಿನ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಒಟ್ಟು 119 ಹುದ್ದೆಗಳಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025 ಏಪ್ರಿಲ್ 7ರಿಂದ 2025 ಏಪ್ರಿಲ್ 20ರೊಳಗೆ ಅಧಿಕೃತ ವೆಬ್‌ಸೈಟ್‌ (www.idbibank.in) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 


ಹುದ್ದೆಗಳ ವಿವರ :
- ಹುದ್ದೆ ಹೆಸರು : ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ
- ಒಟ್ಟು ಹುದ್ದೆಗಳು : 119


ಹುದ್ದೆ ವಿವರ :
ಡೆಪ್ಯುಟಿ ಜನರಲ್ ಮ್ಯಾನೇಜರ್ (DGM) : 8
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (AGM) : 42 
ಮ್ಯಾನೇಜರ್ : 69 

ಮಾಸಿಕ ವೇತನ : 
ಡೆಪ್ಯುಟಿ ಜನರಲ್ ಮ್ಯಾನೇಜರ್ (DGM) : ₹1,97,000
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (AGM) : 1,64,000
ಮ್ಯಾನೇಜರ್ : 1,24,000


ಅರ್ಹತಾ ವಿವರಗಳು :
- ಶೈಕ್ಷಣಿಕ ಅರ್ಹತೆ :
  - ಡೆಪ್ಯುಟಿ ಜನರಲ್ ಮ್ಯಾನೇಜರ್ (DGM) : CA ಅಥವಾ ICWA, B.Sc, B.E ಅಥವಾ B.Tech, ಪದವಿ, MBA, M.Sc, ಮಾಸ್ಟರ್ ಡಿಗ್ರಿ
  - ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (AGM) : CA ಅಥವಾ ICWA, BCA, B.Sc, LLB, B.E ಅಥವಾ B.Tech, ಪದವಿ, MCA, M.Sc, M.E ಅಥವಾ M.Tech, MBA, ಸ್ನಾತಕೋತ್ತರ
  - ಮ್ಯಾನೇಜರ್ : CA ಅಥವಾ ICWA, BCA, B.Sc, B.E ಅಥವಾ B.Tech, ಪದವಿ, MBA


- ವಯೋಮಿತಿ:
  - ಡೆಪ್ಯುಟಿ ಜನರಲ್ ಮ್ಯಾನೇಜರ್ (DGM) : 35 ರಿಂದ 45 ವರ್ಷ
  - ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (AGM) : 28 ರಿಂದ 40 ವರ್ಷ
  - ಮ್ಯಾನೇಜರ್ : 25 ರಿಂದ 35 ವರ್ಷ


ವಯೋಮಿತಿಯಲ್ಲಿ ಸಡಿಲಿಕೆ :
- OBC (ನಾನ್-ಕ್ರೀಮಿ ಲೇಯರ್) ಅಭ್ಯರ್ಥಿಗಳಿಗೆ: 3 ವರ್ಷ
- SC/ST/ಭೂಪೂರ್ವ ಸೈನಿಕ ಅಭ್ಯರ್ಥಿಗಳಿಗೆ: 5 ವರ್ಷ


ಅರ್ಜಿ ಶುಲ್ಕ :
- SC/ST ಅಭ್ಯರ್ಥಿಗಳಿಗೆ: ₹250/-
- ಸಾಮಾನ್ಯ/EWS ಮತ್ತು OBC ಅಭ್ಯರ್ಥಿಗಳಿಗೆ: ₹1,050/-


ಆಯ್ಕೆ ಪ್ರಕ್ರಿಯೆ :
ಪ್ರಾಥಮಿಕ ಪರೀಕ್ಷೆ, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.


ಅರ್ಜಿ ಸಲ್ಲಿಸುವ ವಿಧಾನ :
1. ಐಡಿಬಿಐ ಬ್ಯಾಂಕ್ ಅಧಿಕೃತ ಅಧಿಸೂಚನೆಯನ್ನು ಗಮನವಾಗಿ ಓದಿ, ಅಭ್ಯರ್ಥಿ ಅರ್ಹತೆಗಳನ್ನು ಪರಿಶೀಲಿಸಿ.
2. ಆನ್‌ಲೈನ್ ಅರ್ಜಿ ಭರ್ತಿಯ ಮೊದಲು, ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿಸಿ. ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
3. ಕೆಳಗಿನ ಲಿಂಕ್ ಮೂಲಕ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ.
4. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
5. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
6. ಅರ್ಜಿ ಸಲ್ಲಿಸಿದ ನಂತರ, ಭವಿಷ್ಯದಲ್ಲಿ ಉಲ್ಲೇಖಿಸಲು ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.


ಪ್ರಮುಖ ದಿನಾಂಕಗಳು :
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 2025 ಏಪ್ರಿಲ್ 7
- ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಕೊನೆಯ ದಿನಾಂಕ: 2025 ಏಪ್ರಿಲ್ 20


ಈ ಅವಕಾಶವನ್ನು ಆಸಕ್ತ ಅಭ್ಯರ್ಥಿಗಳು ಸದ್ಬಳಕೆ ಮಾಡಿಕೊಳ್ಳಬಹುದು.

Comments