Loading..!

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಹಾವೇರಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:23 ಜನವರಿ 2020
not found
ಹಾವೇರಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಹಾವೇರಿ ಇಲ್ಲಿ ಖಾಲಿ ಇರುವ ಈ ಕೆಳಗೆ ವಿವರಿಸಿದ ಹುದ್ದೆಗಳನ್ನು ಮೆರಿಟ್ ಹಾಗೂ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳಿಗೆ ಸಂದರ್ಶನವು "ಜಿಲ್ಲಾ ಸಮುದಾಯ ಆರೋಗ್ಯ ಭವನ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆವರಣ, ಹಾವೇರಿ" ಇಲ್ಲಿ ದಿನಾಂಕ 04 ಫೆಬ್ರವರಿ 2020 ರಂದು ನಡೆಯಲಿದೆ.
ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯವರೆಗೆ ಅರ್ಜಿಗಳನ್ನು ವಿತರಿಸಲಾಗುವುದು ಹಾಗೂ ಅದೇ ದಿನ ಮಧ್ಯಾಹ್ನ 03:00 ಗಂಟೆಯ ನಂತರ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನಡೆಸಲಾಗುವುದು. ಈ ಸ್ಥಳದಲ್ಲಿ ಸ್ವತಃ ಅಭ್ಯರ್ಥಿಗಳು ಹಾಜರಿದ್ದು ಮೂಲ ದಾಖಲಾತಿಗಳ ದೃಢೀಕರಿಸಿದ ಜೆರಾಕ್ಸ್ ಪ್ರತಿ ಹಾಜರುಪಡಿಸಲು ಸೂಚಿಸಲಾಗಿದೆ.

ಹುದ್ದೆಗಳ ವಿವರ ಈ ಕೆಳಗಿನಂತಿದೆ :
ಮೆಡಿಕಲ್ ಆಫೀಸರ್ - 1
ಡಿಸ್ಟ್ರಿಕ್ಟ್ ಪ್ರೋಗ್ರಾಮ್ ಕೋ ಆರ್ಡಿನೇಟರ - 1
ಡಿಸ್ಟ್ರಿಕ್ಟ್ ಪಿಪಿಎಂ ಕೋ ಆರ್ಡಿನೇಟರ್ - 1
ಸೀನಿಯರ್ ಟ್ರೀಟ್ಮೆಂಟ್ ಸೂಪರ್ವೈಸರ್ - 5
ಸೀನಿಯರ್ ಲ್ಯಾಬರೋಟರಿ ಸೂಪರ್ ವೈಸರ್ -5
ಹೇಲ್ತ್ ವಿಸಿಟರ್ -2
ಅಕೌಂಟೆಂಟ್ - 1

ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳಾದ ಮೀಸಲಾತಿ, ವೇತನ ಶ್ರೇಣಿ, ವಿದ್ಯಾರ್ಹತೆ, ವಯೋಮಿತಿ ಕುರಿತು ಹೆಚ್ಚಿನ ವಿವರಗಳಿಗೆ ಈ ಕೆಳಗೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಡೌನ್ ಲೋಡ್ ಮಾಡಿಕೊಂಡು ಅಭ್ಯರ್ಥಿಗಳು ಓದಿ ಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ ಕೂಡ ಮಾಹಿತಿಯನ್ನು ಪಡೆಯಬಹುದಾಗಿದೆ
: 08375-297289
No. of posts:  16
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments