ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಾಗಲಕೋಟೆ ಇಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:23 ಎಪ್ರಿಲ್ 2021

2021-22ನೇ ಸಾಲಿನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬಾಗಲಕೋಟೆ ಇದರ ಅಡಿಯಲ್ಲಿ ಬರುವ ಉಪವಿಭಾಗ ಕಚೇರಿಗಳಲ್ಲಿ ಖಾಲಿ ಇರುವ ಹಿರಿಯ ಅಥವಾ ಕಿರಿಯ ವಿಶ್ಲೇಷಣೆ ಗಾರರು ಮತ್ತು ಮಾದರಿ ಸಂಗ್ರಹಗಾರರು ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
*ಹುದ್ದೆಗಳ ವಿವರ :
- ಹಿರಿಯ ವಿಶ್ಲೇಷಣಾಕಾರರು
- ಕಿರಿಯ ವಿಶ್ಲೇಷಣಾಕಾರರು
- ನೀರಿನ ಮಾದರಿ ಸಂಗ್ರಹಗಾರರು
ಸ್ವವಿವರದೊಂದಿಗೆ ಅರ್ಜಿ ಸಲ್ಲಿಸುವ ವಿಳಾಸ : ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಹಳೇ ತಹಸೀಲ್ದಾರ್ ಕಚೇರಿ ಕಟ್ಟಡ, ಬಾಗಲಕೋಟೆ.
ಅರ್ಜಿ ಸಲ್ಲಿಸುವ ದಿನಾಂಕ : 21-04-2021 ರಿಂದ 01-05-2021 ಸಾಯಂಕಾಲ 04 ಗಂಟೆಯವರೆಗೆ
No. of posts: 5
Comments