ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮ (ESIC) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮ (ESIC) ಕಲಬುರ್ಗಿ, 2025 ನೇ ಸಾಲಿನ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ. ಈ ನೇಮಕಾತಿಯಡಿ ಹಿರಿಯ ನಿವಾಸಿ (Senior Resident), ಪ್ರಾಧ್ಯಾಪಕ (Professor), ಸಹಾಯಕ ಪ್ರಾಧ್ಯಾಪಕ (Assistant Professor) ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಹಿರಿಯ ನಿವಾಸಿ (Senior Resident) ಹುದ್ದೆಗಳ ವಿವರ :
- ಹುದ್ದೆಗಳ ಸಂಖ್ಯೆ : 57
ವೇತನ ಶ್ರೇಣಿ :
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 1,36,483/- ವೇತನವನ್ನು ನಿಗದಿಪಡಿಸಲಾಗಿದೆ.
ಅರ್ಹತಾ ವಿವರಗಳು :
- ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ DNB, MS/MD ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಪ್ರಮುಖ ದಿನಾಂಕಗಳು :
- ಅಧಿಕೃತ ಸಂದರ್ಶನ ದಿನಾಂಕ : 28-02-2025
- ಡಾಕ್ಯುಮೆಂಟ್ ಪರಿಶೀಲನೆ : 27-02-2025
- ಅರ್ಜಿ ಶುಲ್ಕ:
- ಇತರ ಎಲ್ಲಾ ಅಭ್ಯರ್ಥಿಗಳು : ₹300/-
- SC/ST/ಮಹಿಳಾ ಅಭ್ಯರ್ಥಿಗಳಿಗೆ : ಶುಲ್ಕವಿಲ್ಲ
ವಯೋಮಿತಿ :
- ಅಭ್ಯರ್ಥಿಗಳು ಗರಿಷ್ಠ 44 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ಪ್ರಾಧ್ಯಾಪಕರ ಹುದ್ದೆಗಳಿಗೆ ವಿವರಗಳು :
- ಹುದ್ದೆಗಳ ಸಂಖ್ಯೆ : 32
- ಹುದ್ದೆಗಳ ಹೆಸರು :
- ಪ್ರಾಧ್ಯಾಪಕ : 06 ಹುದ್ದೆ
- ಸಹ ಪ್ರಾಧ್ಯಾಪಕ : 14 ಹುದ್ದೆ
- ಸಹಾಯಕ ಪ್ರಾಧ್ಯಾಪಕ : 12 ಹುದ್ದೆ
- ವಿದ್ಯಾರ್ಹತೆ : NMC ನಿಯಮಾವಳಿಯಂತೆ
ಪ್ರಮುಖ ದಿನಾಂಕಗಳು :
- ಅಧಿಕೃತ ಸಂದರ್ಶನ ದಿನಾಂಕ : 28-02-2025
- ಡಾಕ್ಯುಮೆಂಟ್ ಪರಿಶೀಲನೆ : 27-02-2025
- ಅರ್ಜಿ ಶುಲ್ಕ :
- ಇತರ ಎಲ್ಲಾ ಅಭ್ಯರ್ಥಿಗಳು: ₹300/-
- SC/ST/ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ
ವೇತನ ಶ್ರೇಣಿ :
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 1,36,483/- ರೂ ಗಳಿಂದ 2,38,896/- ರೂ ಗಳ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.
- ವಯೋಮಿತಿ :
- ಅಭ್ಯರ್ಥಿಗಳು ಗರಿಷ್ಠ 69 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು. (ನಿಯಮಾನುಸಾರ ವಯೋಮಿತಿಯ ರಿಯಾಯಿತಿ ಲಭ್ಯವಿದೆ)
ಅಭ್ಯರ್ಥಿಗಳಿಗೆ ಮುಖ್ಯ ಸೂಚನೆಗಳು :
ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆ ಓದಬಹುದಾಗಿದೆ.
ಹೆಚ್ಚಿನ ಮಾಹಿತಿ ಮತ್ತು ನೇರ ಸಂದರ್ಶನ ಸ್ಥಳ ವಿವರಗಳಿಗಾಗಿ ಅಧಿಕೃತ ಪ್ರಕಟಣೆಯನ್ನು ಗಮನಿಸಿ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ!
Comments