ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್(CSL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (Cochin Shipyard Limited) ಇಲಾಖೆಯಿಂದ 2025ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. 70 ಸೆಮಿ ಸ್ಕಿಲ್‌ಡ್ ರಿಗ್ಗರ್ ಮತ್ತು ಸ್ಕ್ಯಾಫೋಲ್ಡರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಉದ್ಯೋಗ ವಿವರಗಳು :
- ಇಲಾಖೆ ಹೆಸರು : ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್
- ಹುದ್ದೆಗಳ ಹೆಸರು : ಸೆಮಿ ಸ್ಕಿಲ್‌ಡ್ ರಿಗ್ಗರ್, ಸ್ಕ್ಯಾಫೋಲ್ಡರ್
- ಒಟ್ಟು ಹುದ್ದೆಗಳು : 70
- ಉದ್ಯೋಗ ಸ್ಥಳ : ಭಾರತಾದ್ಯಂತ
- ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್/ಆಫ್‌ಲೈನ್
ಹುದ್ದೆಗಳ ವಿವರ :
- ಸ್ಕ್ಯಾಫೋಲ್ಡರ್ : 11 ಹುದ್ದೆಗಳು
- ಸೆಮಿ ಸ್ಕಿಲ್‌ಡ್ ರಿಗ್ಗರ್ : 59 ಹುದ್ದೆಗಳು
ಶೈಕ್ಷಣಿಕ ಅರ್ಹತೆ :
- ಸ್ಕ್ಯಾಫೋಲ್ಡರ್ : ಕನಿಷ್ಠ 10ನೇ ತರಗತಿ ಪಾಸಾಗಿರಬೇಕು.
- ಸೆಮಿ ಸ್ಕಿಲ್‌ಡ್ ರಿಗ್ಗರ್ : ಕನಿಷ್ಠ 4ನೇ ತರಗತಿ ಪಾಸಾಗಿರಬೇಕು.
ವಯೋಮಿತಿ :
- ಗರಿಷ್ಠ 45 ವರ್ಷ ಗಳ ವಯೋಮಿತಿಯನ್ನು ಹೊಂದಿರಬೇಕು.
- ವಯಸ್ಸಿನ ಸಡಿಲಿಕೆ :
- ಒಬಿಸಿ (NCL) ಅಭ್ಯರ್ಥಿಗಳಿಗೆ: 3 ವರ್ಷಗಳು
- ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷಗಳು
ಅರ್ಜಿ ಶುಲ್ಕ :
- ಎಸ್‌ಸಿ/ಎಸ್‌ಟಿ : ಶುಲ್ಕವಿಲ್ಲ
- ಇತರ ಎಲ್ಲಾ ಅಭ್ಯರ್ಥಿಗಳು : ರೂ.200/-
ಆಯ್ಕೆ ವಿಧಾನ :
- ಪ್ರಾಯೋಗಿಕ ಪರೀಕ್ಷೆ
- ದೈಹಿಕ ಪರೀಕ್ಷೆ
- ಸಂದರ್ಶನ
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 12-ಮಾರ್ಚ್-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-ಮಾರ್ಚ್-2025
ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್‌ಗಾಗಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ವೆಬ್‌ಸೈಟ್‌ಗೆ ಭೇಟಿ ನೀಡಿ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ, ಈ ಅವಕಾಶವನ್ನು ಬಳಸಿಕೊಳ್ಳಿ!
Comments