ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆ (CARI)ಯಲ್ಲಿ ನೇಮಕಾತಿ : ಸಲಹೆಗಾರರು ಮತ್ತು ಹಿರಿಯ ಸಂಶೋಧನಾ ಫೆಲೋ ಹುದ್ದೆಗಳಿಗೆ ನೇರ ಸಂದರ್ಶನ

ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆ (CARI) ಯಲ್ಲಿ ಖಾಲಿ ಇರುವ 16 ಸಲಹೆಗಾರರು (ಕನ್ಸಲ್ಟೆಂಟ್) ಮತ್ತು ಹಿರಿಯ ಸಂಶೋಧನಾ ಫೆಲೋ (ಸೀನಿಯರ್ ರಿಸರ್ಚ್ ಫೆಲೋ - SRF) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ :
- ಡೊಮೈನ್ ಎಕ್ಸ್‌ಪರ್ಟ್ ಹುದ್ದೆಗಳು : 1
- ಕನ್ಸಲ್ಟೆಂಟ್ ಹುದ್ದೆಗಳು : 1
- ಹಿರಿಯ ಸಂಶೋಧನಾ ಫೆಲೋ (SRF) ಹುದ್ದೆಗಳು : 13
- ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳು : 1
ವಿದ್ಯಾರ್ಹತೆ :
> ಡೊಮೈನ್ ಎಕ್ಸ್‌ಪರ್ಟ್ ಹುದ್ದೆಗಳಿಗೆ : ಎಂ.ಡಿ
> ಕನ್ಸಲ್ಟೆಂಟ್ ಹುದ್ದೆಗಳಿಗೆ : ಪದವಿ
> ಹಿರಿಯ ಸಂಶೋಧನಾ ಫೆಲೋ (SRF) ಹುದ್ದೆಗಳಿಗೆ : BAMS, B.E ಅಥವಾ B.Tech, MCA, M.A, M.Pharma, M.Sc, M.D, M.Phil, ಮಾಸ್ಟರ್ಸ್ ಪದವಿ, ಸ್ನಾತಕೋತ್ತರ
> ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳಿಗೆ : ಎಂ.ಎಸ್‌ಸಿ ವಿದ್ಯಾರ್ಹತೆಯನ್ನು ಮಾನ್ಯತೆಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.
ವಯೋಮಿತಿ : ನೇಮಕಾತಿ ನಿಯಮಾನುಸಾರವಾಗಿ ಗರಿಷ್ಠ ವಯೋಮಿತಿಯನ್ನು ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
- ಡೊಮೈನ್ ಎಕ್ಸ್‌ಪರ್ಟ್ ಹುದ್ದೆಗಳಿಗೆ : 64 ವರ್ಷ
- ಕನ್ಸಲ್ಟೆಂಟ್ ಹುದ್ದೆಗಳಿಗೆ : 64 ವರ್ಷ
- ಹಿರಿಯ ಸಂಶೋಧನಾ ಫೆಲೋ (SRF) ಹುದ್ದೆಗಳಿಗೆ : 35 ವರ್ಷ
- ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳಿಗೆ : 32 ವರ್ಷ
ವಯೋಮಿತಿ ಸಡಿಲಿಕೆ :
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷ
ಪಿಡಬ್ಲ್ಯೂಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷ
ಪಿಡಬ್ಲ್ಯೂಡಿ (ಒಬಿಸಿ) ಅಭ್ಯರ್ಥಿಗಳಿಗೆ: 13 ವರ್ಷ
ಪಿಡಬ್ಲ್ಯೂಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ: 15 ವರ್ಷ
ವೇತನ :
✅ ಡೊಮೈನ್ ಎಕ್ಸ್‌ಪರ್ಟ್ ಹುದ್ದೆಗಳಿಗೆ : ರೂ. 75,000/- ಪ್ರತಿ ತಿಂಗಳು
✅ ಕನ್ಸಲ್ಟೆಂಟ್ ಹುದ್ದೆಗಳಿಗೆ : ರೂ. 50,000/- ಪ್ರತಿ ತಿಂಗಳು
✅ ಹಿರಿಯ ಸಂಶೋಧನಾ ಫೆಲೋ (SRF) ಹುದ್ದೆಗಳಿಗೆ : ರೂ. 42,000/- ಪ್ರತಿ ತಿಂಗಳು
✅ ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳಿಗೆ : ರೂ. 37,000/- ಪ್ರತಿ ತಿಂಗಳು
ಆಯ್ಕೆ ಪ್ರಕ್ರಿಯೆ :
ಶೈಕ್ಷಣಿಕ ಅರ್ಹತೆಯ ಆಧಾರ ಮೇಲೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಂದರ್ಶನದ ವಿವರಗಳು :
🔎 ದಿನಾಂಕ: 2025 ಮಾರ್ಚ್ 28
🔎 ಸಮಯ: ಬೆಳಿಗ್ಗೆ 10:00 ಗಂಟೆಗೆ
🔎 ಸ್ಥಳ: ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆ, #12, ಉತ್ತರಹಳ್ಳಿ ಮನವರ್ತೆ ಕಾವಲ್, ಕನಕಪುರ ಮುಖ್ಯ ರಸ್ತೆ, ತಲಘಟ್ಟಪುರ ಪೋಸ್ಟ್, ಬೆಂಗಳೂರು-560109, ಕರ್ನಾಟಕ
ಅಗತ್ಯ ದಾಖಲೆಗಳು :
ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ಮೂಲ ದಾಖಲೆಗಳು ಮತ್ತು ಅವುಗಳ ನಕಲು ಪ್ರತಿಗಳೊಂದಿಗೆ ಸಂದರ್ಶನ ಸ್ಥಳಕ್ಕೆ ಹಾಜರಾಗಬೇಕು.
ಮುಖ್ಯ ದಿನಾಂಕಗಳು :
ಅಧಿಸೂಚನೆ ಬಿಡುಗಡೆ ದಿನಾಂಕ: 2025 ಮಾರ್ಚ್ 11
ವಾಕ್-ಇನ್ ಸಂದರ್ಶನ ದಿನಾಂಕ: 2025 ಮಾರ್ಚ್ 28
ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಗಾಗಿ, CARI ಅಧಿಕೃತ ವೆಬ್‌ಸೈಟ್ (cari.gov.in) ಗೆ ಭೇಟಿ ನೀಡಿ.
Comments