ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಗುತ್ತಿಗೆ ಆಧಾರದ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಬಾರಿ ಒಟ್ಟು 50 ಟ್ರೈನ್ ಆಪರೇಟರ್ (TO) ಹುದ್ದೆಗಳಿವೆ. 2025 ಮಾರ್ಚ್ 12 ರಂದು ಈ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯಲಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025 ಏಪ್ರಿಲ್ 4 ಆಗಿರುತ್ತದೆ. ಅರ್ಜಿದಾರರು ಕರ್ನಾಟಕದವರಾಗಿರಬೇಕು.
ನೇಮಕಾತಿ ಹೈಲೈಟ್ಸ್ :
- ನೇಮಕಾತಿ ಸಂಸ್ಥೆ : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)
- ಹುದ್ದೆಯ ಹೆಸರು : ಟ್ರೈನ್ ಆಪರೇಟರ್
- ಜಾಹೀರಾತು ಸಂಖ್ಯೆ : BMRCL/HR/0004/O&M/2025/
- ಉದ್ಯೋಗದ ಸ್ವರೂಪ : ಗುತ್ತಿಗೆ ಆಧಾರಿತ
- ಒಟ್ಟು ಹುದ್ದೆಗಳು : 50
- ಅರ್ಹ ಅಭ್ಯರ್ಥಿಗಳು : ಕರ್ನಾಟಕದವರು ಮಾತ್ರ
- ಉದ್ಯೋಗ ಸ್ಥಳ : ಬೆಂಗಳೂರು
- ವರ್ಗ : BMRCL ನೇಮಕಾತಿ
ಹುದ್ದೆ ವಿವರಗಳು :
ಟ್ರೈನ್ ಆಪರೇಟರ್ - 50
- ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ₹ 35,000-82,660/- ರೂ ಗಳ ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.
ವಯೋಮಿತಿ :
- ಕನಿಷ್ಟ ವಯಸ್ಸು : 18 ವರ್ಷ
- ಗರಿಷ್ಟ ವಯಸ್ಸು : 38 ವರ್ಷ (ಅಧಿಸೂಚನೆ ದಿನಾಂಕವನ್ನು ಆಧರಿಸಿ)
ಅಗತ್ಯ ಶೈಕ್ಷಣಿಕ ಅರ್ಹತೆಗಳು :
- ಟ್ರೈನ್ ಆಪರೇಟರ್ ಹುದ್ದೆಗಳಿಗೆ 10ನೇ ತರಗತಿ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ / ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ / ಟೆಲಿಕಮ್ಯುನಿಕೇಶನ್ / ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಎಂಜಿನಿಯರಿಂಗ್ / ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ಸ್ / ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ / ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಥವಾ ಸಮಾನ ಶಿಕ್ಷಣ |
ಆಯ್ಕೆ ಪ್ರಕ್ರಿಯೆ :
1. ವೈಯಕ್ತಿಕ ಸಂದರ್ಶನ
2. ಹೆಚ್ಚುವರಿ ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ
3. ವೈದ್ಯಕೀಯ ಫಿಟ್ನೆಸ್ ಪರೀಕ್ಷೆ (ವಿಜುವಲ್ ಅಕ್ಯೂಟಿ ಮಾನದಂಡ ಅಗತ್ಯ)
ಅರ್ಜಿ ಸಲ್ಲಿಸುವ ವಿಧಾನ :
1. BMRCL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ.
3. ಅರ್ಜಿಯ ಪ್ರಿಂಟ್‌ಔಟ್ ತೆಗೆದು, ಸ್ವಯಂ ಅಟ್ಟೆಸ್ಟ್ ಮಾಡಿ.
4. ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಕಳುಹಿಸಿ.
5. ಲಿಖಿತ ಅರ್ಜಿಯನ್ನು ಈ ವಿಳಾಸಕ್ಕೆ ಕಳಿಸಿ:
ಸಾಮಾನ್ಯ ವ್ಯವಸ್ಥಾಪಕರು (ಮಾನವ ಸಂಪತ್ತು), ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ಮೂರನೇ ಮಹಡಿ, BMTC ಕಾಂಪ್ಲೆಕ್ಸ್, ಕೆ.ಎಚ್ ರೋಡ್, ಶಾಂತಿನಗರ, ಬೆಂಗಳೂರು - 560027.
6. ಲಕೋಟೆಯ ಮೇಲೆ *"APPLICATION FOR THE POST OF TRAIN OPERATOR"* ಎಂದು ಬರೆಯಬೇಕು.
ಪ್ರಮುಖ ದಿನಾಂಕಗಳು :
- ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ : 2025 ಏಪ್ರಿಲ್ 4
- ಹಾರ್ಡ್‌ಕಾಪಿ ಸಲ್ಲಿಕೆ ಕೊನೆಯ ದಿನಾಂಕ : 2025 ಏಪ್ರಿಲ್ 9 ಸಂಜೆ 4:00 ಘಂಟೆಗೆ ಮೊದಲು
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಶ್ರದ್ಧೆಯಿಂದ ಭರ್ತಿ ಮಾಡಿ, ಎಲ್ಲಾ ದಾಖಲೆಗಳನ್ನು ಸರಿಯಾಗಿ ಲಗತ್ತಿಸಿ, ಮತ್ತು ಕೊನೆಯ ದಿನಾಂಕದೊಳಗೆ ಸಲ್ಲಿಸುವುದು ಅನಿವಾರ್ಯ. ಈ ಅವಕಾಶವನ್ನು ಬಳಸಿ ನಿಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ!
Comments