ಬಳ್ಳಾರಿ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್ (BMCRC) ನೇಮಕಾತಿ 2025: ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
Published by: Bhagya R K | Date:20 ಮಾರ್ಚ್ 2025
not found

ಬಳ್ಳಾರಿ – ಕರ್ನಾಟಕ: ಬಳ್ಳಾರಿ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್ (BMCRC) 2025 ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025 ಏಪ್ರಿಲ್ 2ರಂದು ಬೆಳಗ್ಗೆ 9:30ಕ್ಕೆ ನಡೆಯುವ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು.


ಸಂಸ್ಥೆಯ ಹೆಸರು : ಬಳ್ಳಾರಿ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್ (BMCRC)  
ಒಟ್ಟು ಹುದ್ದೆಗಳ ಸಂಖ್ಯೆ : 103  
ಉದ್ಯೋಗ ಸ್ಥಳ : ಬಳ್ಳಾರಿ – ಕರ್ನಾಟಕ  
ಹುದ್ದೆಯ ಹೆಸರು : ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್  


ವೇತನ ಶ್ರೇಣಿ : BMCRC ಬಳ್ಳಾರಿ ನೇಮಕಾತಿ ನಿಯಮಾನುಸಾರ ಮಾಸಿಕ ವೇತನವನ್ನು ನೀಡಲಾಗುತ್ತದೆ.


BMCRC ಹುದ್ದೆ ವಿವರ :
ಪ್ರೊಫೆಸರ್ - 6 
ಅಸೋಸಿಯೇಟ್ ಪ್ರೊಫೆಸರ್ - 22 
ಅಸಿಸ್ಟೆಂಟ್ ಪ್ರೊಫೆಸರ್ - 22 
ಸೀನಿಯರ್ ರೆಸಿಡೆಂಟ್ - 48 
ಇಂಟೆನ್ಸಿವಿಸ್ಟ್ - 5 


ವಿಭಾಗಗಳು:
ಜೆನೆರಲ್ ಮೆಡಿಸಿನ್, ಜೆನೆರಲ್ ಸರ್ಜರಿ, ಆರ್ಥೋಪೆಡಿಕ್, ಒಬಿಜಿ, ಯುರೋಲಜಿ, ಅನಸ್ತೇಷಿಯಾಲಜಿ, ರೇಡಿಯೋಥೆರಪಿ, ರೇಡಿಯೋ ಡಯಾಗ್ನೋಸಿಸ್, ಟಿಬಿ ಅಂಡ್ ಸಿಡಿ, ಪ್ಲಾಸ್ಟಿಕ್ ಸರ್ಜರಿ, ಪೀಡಿಯಾಟ್ರಿಕ್ಸ್ ಸರ್ಜರಿ, ಸೈಕಿಯಾಟ್ರಿ, ನೆಫ್ರೋಲಜಿ, ಮೆಡಿಕಲ್ ಗ್ಯಾಸ್ಟ್ರೋಎಂಟರೋಲಜಿ, ಎಂಡೊಕ್ರೈನಾಲಜಿ, ಸರ್ಜಿಕಲ್ ಗ್ಯಾಸ್ಟ್ರೋಎಂಟರೋಲಜಿ, ಕಾರ್ಡಿಯೋಥೊರಾಸಿಕ್ ಸರ್ಜರಿ, ನ್ಯೂರೋಲಜಿ, ಎಮರ್ಜೆನ್ಸಿ ಮೆಡಿಸಿನ್, ಸರ್ಜಿಕಲ್ ಆಂಕಾಲಜಿ, ಮೆಡಿಕಲ್ ಆಂಕಾಲಜಿ, ನ್ಯೂರೋಸರ್ಜರಿ.


ಅರ್ಹತಾ ವಿವರ :
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ: BMCRC ಬಳ್ಳಾರಿ ನಿಯಮಗಳ ಪ್ರಕಾರ  


ವಯೋಮಿತಿ ಸಡಿಲಿಕೆ :
BMCRC ಬಳ್ಳಾರಿ ನಿಯಮಗಳ ಪ್ರಕಾರ ಲಭ್ಯವಿರುತ್ತದೆ.  


ಅರ್ಜಿ ಶುಲ್ಕ :
- ಎಲ್ಲಾ ಅಭ್ಯರ್ಥಿಗಳು: ರೂ. 1000/-  
- ಪಾವತಿ ವಿಧಾನ: ಡಿಮಾಂಡ್ ಡ್ರಾಫ್ಟ್  


ಮೂಲ್ಯಮಾಪನ ಪ್ರಕ್ರಿಯೆ :
ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.  


BMCRC ಬಳ್ಳಾರಿ ನೇಮಕಾತಿಗೆ ಹಾಜರಾಗುವ ವಿಧಾನ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗೆ ನೀಡಿರುವ ಸ್ಥಳಕ್ಕೆ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ನೇರ ಸಂದರ್ಶನಕ್ಕೆ ಹಾಜರಾಗಬಹುದು:  


ಸ್ಥಳ : ಆಡಳಿತ ಕಚೇರಿ, BMCRC ಬಳ್ಳಾರಿ, ಕರ್ನಾಟಕ  
ಸಂದರ್ಶನ ದಿನಾಂಕ : 02-04-2025 ಬೆಳಗ್ಗೆ 9:30 ಗಂಟೆಗೆ  


ಮುಖ್ಯ ದಿನಾಂಕಗಳು :
- ಅಧಿಸೂಚನೆ ಬಿಡುಗಡೆ ದಿನಾಂಕ : 15-03-2025  
- ದಾಖಲೆ ಪರಿಶೀಲನೆ ದಿನಾಂಕ : 02-04-2025 ಮಧ್ಯಾಹ್ನ 1:00 ಗಂಟೆಗೆ  
- ವಾಕ್-ಇನ್ ಸಂದರ್ಶನ ದಿನಾಂಕ : 02-04-2025 ಬೆಳಗ್ಗೆ 9:30 ಗಂಟೆಗೆ  


ಅಗತ್ಯ ದಾಖಲೆಗಳು:
- ಶೈಕ್ಷಣಿಕ ದಾಖಲೆಗಳ ಮೂಲ ಪ್ರತಿಗಳು
- 02 ಇತ್ತೀಚಿನ ಭಾವಚಿತ್ರಗಳು
- ರೂ. 1000/- ಶುಲ್ಕದ ಡಿಮ್ಯಾಂಡ್ ಡ್ರಾಫ್ಟ್ (ಡೀನ್ ಮತ್ತು ನಿರ್ದೇಶಕರು, BMCRC, ಬಳ್ಳಾರಿ ಇವರ ಹೆಸರಿನಲ್ಲಿ)
- ಎಲ್ಲಾ ದಾಖಲೆಗಳ ಎರಡು ಜೆರಾಕ್ಸ್ ಪ್ರತಿಗಳು


ಗಮನಿಸಬೇಕಾದ ಸೂಚನೆಗಳು:
- ಅಭ್ಯರ್ಥಿಗಳು ರಾಷ್ಟ್ರೀಯ ವೈದ್ಯಕೀಯ ಪರಿಷತ್ತಿನ (NMC) ನಿಯಮಗಳ ಪ್ರಕಾರ ಅರ್ಹರಾಗಿರಬೇಕು.
- ನೇಮಕಾತಿ ಪ್ರಕ್ರಿಯೆ ಸರ್ಕಾರದ ರೋಸ್ಟರ್ ನಿಯಮಾನುಸಾರ ನಡೆಯಲಿದೆ.
- ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.
- ನೇಮಕಾತಿ ಗುತ್ತಿಗೆ ಆಧಾರಿತವಾಗಿದ್ದು, ಖಾಯಂ ನೇಮಕಾತಿಗೆ ಅವಕಾಶವಿರುವುದಿಲ್ಲ.


ಈ ಅವಕಾಶವನ್ನು ಬಳಸಿಕೊಳ್ಳಿ ಮತ್ತು ನಿಮ್ಮ ವೃತ್ತಿ ಬದುಕನ್ನು BMCRC ಬಳ್ಳಾರಿಯೊಂದಿಗೆ ಬೆಳೆಸಿಕೊಳ್ಳಿ!

Comments