Loading..!

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ನೇಮಕಾತಿ : ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
| Date:15 ಜೂನ್ 2019
not found
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಟಮಕ, ಕೋಲಾರ ಹಾಗು ವಿಶ್ವವಿದ್ಯಾಲಯದ ಅಧೀನಕೊಳ್ಳಪಡುವ ಸ್ನಾತಕೋತ್ತರ ಕೇಂದ್ರ, ಕೋಲಾರದ ಸ್ನಾತಕೋತ್ತರ ವಿಭಾಗಗಳಿಗೆ ಹಾಗೂ ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜು, ಚಿಕ್ಕಬಳ್ಳಾಪುರ 2019-20 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಭೋದನಾ ಕಾರ್ಯಭಾರದ ನಿರ್ವಹಣೆಗಾಗಿ ಯುಜಿಸಿ ನಿಯಮಾನುಸಾರ ಪೂರ್ವಕಾಲಿಕ ಅಥವಾ ಅರೆಕಾಲಿಕ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಈ ಕೆಳಕಂಡ ವಿಷಯಗಳ ಬೋಧನ ಕಾರ್ಯಕ್ಕನುಗುಣವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಅತಿಥಿ ಉಪನ್ಯಾಸಕರು ಬೇಕಾಗಿರುವ ವಿಷಯಗಳು :
ಕನ್ನಡ
ಇಂಗ್ಲಿಷ್
ವಾಣಿಜ್ಯ
ಅರ್ಥಶಾಸ್ತ್ರ
ರಾಜ್ಯಶಾಸ್ತ್ರ
ಸಮಾಜಕಾರ್ಯ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
ಶಿಕ್ಷಣ(B Ed)
ಸಸ್ಯಶಾಸ್ತ್ರ
ಗಣಕ ವಿಜ್ಞಾನ
ಭೌತಶಾಸ್ತ್ರ
ಗಣಿತಶಾಸ್ತ್ರ ಮತ್ತು
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ

ಅರ್ಜಿ ನಮೂನೆಗಳನ್ನು ಕೆಳಗೆ ನೀಡಿರುವ ಲಿಂಕ್ ನ ಮೂಲಕ ಡೌನ್ಲೋಡ್ ಮಾಡಿಕೊಂಡು ಬರ್ತಿಮಾಡಿಕೊಂಡು, ನಂತರ ಭರ್ತಿ ಮಾಡಿದ ಅರ್ಜಿಗಳನ್ನು ಈ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ಕಳುಹಿಸಿಕೊಡಬೇಕು
ವಿಳಾಸ :
ಕುಲಸಚಿವರು,
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ( ಆಡಳಿತ ಕಚೇರಿ )
ಟಮಕ, ಕೋಲಾರ - 5 6 3 1 0 3
ಅಥವಾ
ಕುಲಸಚಿವರು,
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ (ನಗರ ಕಚೇರಿ)
ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ
ಬೆಂಗಳೂರು-560001

ಈ ಮೇಲಿನ ವಿಳಾಸಕ್ಕೆ ದಿನಾಂಕ 17 6 2019 ರ ಸಾಯಂಕಾಲ 5 ಗಂಟೆಯವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಸೂಚನೆ ವಿಶೇಷ : ಕನ್ನಡ, ವಾಣಿಜ್ಯ, ಸಮಾಜಕಾರ್ಯ ವಿಭಾಗಗಳ ಅರ್ಜಿದಾರರು ಈಗಾಗಲೇ ವಿಶ್ವವಿದ್ಯಾಲಯದ ಪ್ರಕಟಣೆ ದಿನಾಂಕ 08 03 2019ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ, ಪುನ್ಹ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಆದರೆ ಹೆಚ್ಚಿನ ಮಾಹಿತಿ ಇದ್ದಲ್ಲಿ ದ್ವಿಪ್ರತಿಯಲ್ಲಿ ಸಲ್ಲಿಸುವುದು.

ಈ ಕುರಿತ ಯಾವುದೇ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಮಾಹಿತಿ ದೂರವಾಣಿ ಸಂಖ್ಯೆ 08152 243152/53 ಗೆ ಸಂಪರ್ಕಿಸಬಹುದು ಅಥವಾ ವಿಶ್ವವಿದ್ಯಾಲಯದ ಜಾಲತಾಣ ಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಬಹುದು.

Comments