Loading..!

ಅರ್ಜಿ ಸಲ್ಲಿಸಲು ಇಂದು ಕೊನೆ ದಿನ | ಭಾರತೀಯ ಸೇನೆ ಸೇರುವವರಿಗೆ ಸುವರ್ಣಾವಕಾಶ ಬೆಳಗಾವಿ ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ
Tags: PUC SSLC
Published by: Hanamant Katteppanavar | Date:20 ಜನವರಿ 2021
not found

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಹೊಂದಿದ ರಾಜ್ಯದ ಅಭ್ಯರ್ಥಿಗಳಿಗೊಂದು ಸುವರ್ಣಾವಕಾಶ ಒದಗಿ ಬಂದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಭಾರತೀಯ ಸೇನಾ ನೇಮಕಾತಿ ರ್ಯಾಲಿ ಆಯೋಜಿಸಲಾಗಿದ್ದು, ಈ ಕುರಿತು ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. 
ಈಗಾಗಲೇ ಈ ನೇಮಕಾತಿ ರ್ಯಾಲಿಯಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ನೇಮಕಾತಿ ರ್ಯಾಲಿಯು ಕರ್ನಾಟಕದ ಜಿಲ್ಲೆಗಳಾದ ಬೆಳಗಾಂ, ಬೀದರ್, ಗುಲ್ಬರ್ಗಾ, ಕೊಪ್ಪಲ್, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅನ್ವಯಿಸಲಿದೆ.

ಹುದ್ದೆಗಳ ವಿವರಗಳು : 
* ಸೋಲ್ಜರ್ ಜನರಲ್ ಡ್ಯೂಟಿ
* ಸೋಲ್ಜರ್ ಟೆಕ್ನಿಕಲ್
* ಸೋಲ್ಜರ್ ಟೆಕ್ನಿಕಲ್ (Aviation/Ammunition Examiner)
* ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟೆಂಟ್  (AMC)/Nursing Assistant Veterinary (NA VET)
* ಸೋಲ್ಜರ್ Clerk/Store Keeper/ Technical/ Inventory Management 
* ಸೋಲ್ಜರ್ ಟ್ರೇಡ್ ಮ್ಯಾನ್ 10th pass
* ಸೋಲ್ಜರ್ ಟ್ರೇಡ್ ಮ್ಯಾನ್ 8th pass

* COVID-19 ಸಾಂಕ್ರಾಮಿಕ ಪರಿಸ್ಥಿತಿಯ ನಂತರ ಫೆಬ್ರವರಿ 01 ರಿಂದ 2021 ರ ಮಾರ್ಚ್ 31 ರ ಒಳಗೆ ರ್ಯಾಲಿಯ ನಿಖರವಾದ ದಿನಾಂಕಗಳು ಪ್ರಕಟಣೆಯಾಗಲಿವೆ.
* ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 05 ರಿಂದ 20 ಜನವರಿ 2021 ರವರೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
* ರ್ಯಾಲಿ ನಡೆಯುವ ದಿನಾಂಕಕ್ಕೆ ಒಂದು ವಾರ ಮೊದಲು ರ್ಯಾಲಿಗಾಗಿ ಅಡ್ಮಿಟ್ ಕಾರ್ಡ್‌ಗಳನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವದು.


Comments