ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್(BEL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Tags: Degree
Published by: Yallamma G | Date:28 ಫೆಬ್ರುವರಿ 2025
not found

ದೇಶದ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ನವರತ್ನ ಸಂಸ್ಥೆಯಲ್ಲಿ ಒಂದಾಗಿರುವ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್(BEL) ನಲ್ಲಿ ಖಾಲಿ ಇರುವ 55 ಟ್ರೇನಿ ಇಂಜಿನಿಯರ್, ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿಯನ್ನು ಆನ್ ಲೈನ್ ಮೂಲಕ  ಸಲ್ಲಿಸಬಹುದಾಗಿರುತ್ತದೆ. 


ಹುದ್ದೆಗಳ ವಿವರ : 55
ಟ್ರೈನಿ ಇಂಜಿನಿಯರ್-I: 42
ಪ್ರಾಜೆಕ್ಟ್ ಇಂಜಿನಿಯರ್-I: 3
ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್: 10
ಕೆಲಸದ ಸ್ಥಳ: ಪಂಚಕುಲಾ, ಹರಿಯಾಣ


ವೇತನ ಶ್ರೇಣಿ :
- ಟ್ರೈನಿ ಇಂಜಿನಿಯರ್-I: ಮಾಸಿಕ ರೂ. 
1st Year 30,000/-
2nd Year 35,000/-
- ಪ್ರಾಜೆಕ್ಟ್ ಇಂಜಿನಿಯರ್-I: 
1st Year 40,000/-
2nd Year 45,000/-
3rd Year 50,000/-
- ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್: ಮಾಸಿಕ ರೂ. 30,000-1,20,000/-


ವಿದ್ಯಾರ್ಹತೆ :
ಟ್ರೈನಿ ಇಂಜಿನಿಯರ್-I: B.E ಅಥವಾ B.Tech
ಪ್ರಾಜೆಕ್ಟ್ ಇಂಜಿನಿಯರ್-I: B.E ಅಥವಾ B.Tech
ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್: ಡಿಪ್ಲೊಮಾ
ಅಭ್ಯರ್ಥಿಗಳು ಕನಿಷ್ಠ 2 ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕು. 


ವಯೋಮಿತಿ :
ಟ್ರೈನಿ ಇಂಜಿನಿಯರ್-I: 18 ರಿಂದ 28 ವರ್ಷ
ಪ್ರಾಜೆಕ್ಟ್ ಇಂಜಿನಿಯರ್-I: 18 ರಿಂದ 32 ವರ್ಷ
ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್: ಗರಿಷ್ಠ 50 ವರ್ಷ
ವಯೋಮಿತಿಯಲ್ಲಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 3 ವರ್ಷ
SC/ST ಅಭ್ಯರ್ಥಿಗಳಿಗೆ: 5 ವರ್ಷ
PwBD ಅಭ್ಯರ್ಥಿಗಳಿಗೆ: 10 ವರ್ಷ


ಅರ್ಜಿ ಶುಲ್ಕ :
ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿಗೆ: ಯಾವುದೇ ಶುಲ್ಕವಿಲ್ಲ
ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗೆ:
ಸಾಮಾನ್ಯ/OBC/EWS ಅಭ್ಯರ್ಥಿಗಳು: ರೂ. 472/-
SC/ST/PwBD ಅಭ್ಯರ್ಥಿಗಳು: ಶುಲ್ಕವಿಲ್ಲ
ಟ್ರೈನಿ ಇಂಜಿನಿಯರ್-I ಹುದ್ದೆಗೆ:
ಸಾಮಾನ್ಯ/OBC/EWS ಅಭ್ಯರ್ಥಿಗಳು: ರೂ. 177/-
SC/ST/PwBD ಅಭ್ಯರ್ಥಿಗಳು: ಶುಲ್ಕವಿಲ್ಲ


ಆಯ್ಕೆ ಪ್ರಕ್ರಿಯೆ :ಲೇಖಿತ ಪರೀಕ್ಷೆ ಮತ್ತು ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ :
1 BEL ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಓದಿ.
2 ಅರ್ಜಿ ಸಲ್ಲಿಸುವ ಮೊದಲು, ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ.
3 BEL ಅಧಿಕೃತ ವೆಬ್‌ಸೈಟ್ (bel-india.in) ಮೂಲಕ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
4 ಅರ್ಜಿ ಶುಲ್ಕವನ್ನು (ಅಗತ್ಯವಿದ್ದರೆ) SBI Collect ಮೂಲಕ ಪಾವತಿಸಿ.
5 ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಸಂರಕ್ಷಿಸಿ.


ಮುಖ್ಯ ದಿನಾಂಕಗಳು :
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 2025 ಫೆಬ್ರವರಿ 26
- ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 2025 ಮಾರ್ಚ್ 19
- ಪ್ರಾಜೆಕ್ಟ್ ಇಂಜಿನಿಯರ್-I ಮತ್ತು ಟ್ರೈನಿ ಇಂಜಿನಿಯರ್-I ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 2025 ಮಾರ್ಚ್ 19


ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು, BEL ಅಧಿಕೃತ ವೆಬ್‌ಸೈಟ್ (bel-india.in) ಗೆ ಭೇಟಿ ನೀಡಿ.

Comments

Shiva K ಮಾರ್ಚ್ 9, 2025, 12:43 ಅಪರಾಹ್ನ