ಭಾರತ್ ಎಲೆಕ್ಟ್ರಾನಿಕ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ (BEEI) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ

ಭಾರತ್ ಎಲೆಕ್ಟ್ರಾನಿಕ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ (BEEI) ನಲ್ಲಿ ಖಾಲಿ ಇರುವ 57 PRT, TGT, ಡ್ರಾಯಿಂಗ್ ಟೀಚರ್, ಲೈಬ್ರರಿಯನ್, ಆಫೀಸ್ ಅಸಿಸ್ಟೆಂಟ್, ಲ್ಯಾಬ್ ಅಸಿಸ್ಟೆಂಟ್ ಮತ್ತು ಸಂಗೀತ ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿರುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025 ಏಪ್ರಿಲ್ 1ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ : 57
ವಿಶೇಷ ಶಿಕ್ಷಕ : 1
ಯೋಗ ಶಿಕ್ಷಕ : 1
ಎಲ್ಲಾ ವಿಷಯಗಳು : 2
ಪ್ರಾಥಮಿಕ ಶಿಕ್ಷಕ (PRT) : 8
ಟ್ರೈನ್ಡ್ ಗ್ರಾಜುಯೇಟ್ ಟೀಚರ್ (TGT) : 12
ಚಿತ್ರಕಲೆ ಮತ್ತು ಕ್ರಾಫ್ಟ್ ಶಿಕ್ಷಕ : 1
ನೃತ್ಯ ಶಿಕ್ಷಕ : 2
ಶಾರೀರಿಕ ಶಿಕ್ಷಣ ಶಿಕ್ಷಕ : 2
ಸಾಮಾನ್ಯ ಜ್ಞಾನ / ಮಕ್ಕಳ ಪೋಷಕ ತಜ್ಞ : 1
ಸಮಾಲೋಚಕ : 1
ಪೋಸ್ಟ್ ಗ್ರಾಜುಯೇಟ್ ಟೀಚರ್ (PGT) : 10
ಗ್ರಂಥಪಾಲಕ : 1
ಕಚೇರಿ ಸಹಾಯಕ : 3
ಗ್ರಾಜುಯೇಟ್ ಪ್ರಾಥಮಿಕ ಶಿಕ್ಷಕ (GPT) : 3
ಕಲಾ ಮತ್ತು ಕ್ರಾಫ್ಟ್ : 1
ಸಂಗೀತ ಶಿಕ್ಷಕ : 1
ಪ್ರಯೋಗಾಲಯ ಸಹಾಯಕ : 1
ಉಪನ್ಯಾಸಕ : 4
ಗ್ರಂಥಾಲಯ ಸಹಾಯಕ : 1
ಲೆಕ್ಕಾಧಿಕಾರಿ : 1
ವಿದ್ಯಾರ್ಹತೆ :
ಪ್ರತಿ ಹುದ್ದೆಗೆ ಸಂಬಂಧಿಸಿದಂತೆ ವಿದ್ಯಾರ್ಹತೆ ವಿಭಿನ್ನವಾಗಿದೆ. ಅಭ್ಯರ್ಥಿಗಳು 10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ, ಡಿ.ಎಡ್, ಬಿ.ಎಡ್, ಪದವಿ, ಬಿ.ಎಸ್‌ಸಿ, ಬಿ.ಎ, ಬಿ.ಕಾಂ, ಬಿ.ಲೈಬ್.ಎಸ್‌ಸಿ, ಬಿ.ಎಸ್‌ಸಿ.ಎಡ್, ಬಿ.ಎಲ್.ಎಡ್, ಸ್ನಾತಕೋತ್ತರ ಪದವಿ/ಡಿಪ್ಲೊಮಾ, ಎಂ.ಎ, ಎಂ.ಎಸ್‌ಸಿ, ಎಂಸಿಎ, ಎಂ.ಕಾಂ, ಎಂಇ/ಎಂ.ಟೆಕ್, ಎಂ.ಫಿಲ್, ಪಿಎಚ್‌ಡಿ ವಿದ್ಯಾರ್ಹತೆಗಳನ್ನು ಹೊಂದಿರಬೇಕು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ :
ಅಭ್ಯರ್ಥಿಗಳ ಗರಿಷ್ಠ ವಯಸ್ಸು 2025 ಫೆಬ್ರವರಿ 1ರಂತೆ 45 ವರ್ಷವಾಗಿರಬೇಕು. ನೇಮಕಾತಿ ನಿಯಮಾನುಸಾರವಾಗಿ ವಯೋಮಿತಿ ಸಡಿಲಿಕೆ ಇರಲಿದೆ.
ವೇತನ :
- Special Educator, Yoga Teacher, All Subjects, PRT, Drawing Art & Craft, Dance Teacher, Physical Education Teacher, General Knowledge / Child Nutritionist: Librarian, Art & Craft, Music Teacher & Library Assistant ಹುದ್ದೆಗಳಿಗೆ : Rs. 21,250/-
- TGT, Counsellor, GPT ಹುದ್ದೆಗಳಿಗೆ : Rs. 26,250/-
- PGT & Lecturer ಹುದ್ದೆಗಳಿಗೆ : Rs. 27,500/-
- Office Assistant & Lab Assistant ಹುದ್ದೆಗಳಿಗೆ : Rs. 16,270/-
- Accountant ಹುದ್ದೆಗಳಿಗೆ : Rs. 45,000/-
ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ 2025 ಏಪ್ರಿಲ್ 1ರೊಳಗೆ ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರ ಸೇವೆಗಳ ಮೂಲಕ ಕಳುಹಿಸಬೇಕು:
ಅರ್ಜಿ ಸಲ್ಲಿಸುವ ವಿಳಾಸ :
ಸಚಿವರು – ಬಿಇಇಐ, ಬಿಎಲ್ ಹೈ ಸ್ಕೂಲ್ ಕಟ್ಟಡ, ಜಾಲಹಳ್ಳಿ ಪೋಸ್ಟ್, ಬೆಂಗಳೂರು – 560013
ಮುಖ್ಯ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 2025 ಮಾರ್ಚ್ 12
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 2025 ಏಪ್ರಿಲ್ 1
ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ನಮೂನೆಗಾಗಿ, ಬಿಇಇಐ ಅಧಿಕೃತ ವೆಬ್‌ಸೈಟ್ (beei.edu.in) ಗೆ ಭೇಟಿ ನೀಡಿ.
Comments