Loading..!

ಬ್ಯಾಂಕ್ ಆಫ್ ಮಹಾರಾಷ್ಟ್ರ(BOM) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Yallamma G | Date:4 ಮಾರ್ಚ್ 2025
not found

ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಮಹಾರಾಷ್ಟ್ರ (BOM) ದಲ್ಲಿ ಖಾಲಿ ಇರುವ 20 ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟಂಟ್ ಜನರಲ್ ಮ್ಯಾನೇಜರ್, ಚೀಫ್ ಮ್ಯಾನೇಜರ್ ಮತ್ತು ಸೀನಿಯರ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತದೆಲ್ಲೆಡೆ ಪೂರ್ಣ ಸಮಯದ ಆಧಾರದ ಮೇಲೆ ಕೆಲಸ ಮಾಡಲು ಸಿದ್ಧರಿರುವ ಆಸಕ್ತ  ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 


ಹುದ್ದೆಗಳ ವಿವರ :
General Manager-IBU : 1
Deputy General Manager-IBU : 1
Assistant General Manager-Treasury  : 1
Assistant General Manager-Forex Dealer : 1
Assistant General Manager – Compliance/Risk Management : 1
Assistant General Manager-Credit : 1
Chief Manager-Forex/Credit/Trade Finance : 4
Chief Manager – Compliance/Risk Management : 2
Chief Manager – Legal : 1
Senior Manager – Business Development : 2
Senior Manager – Back Office Operations : 5

ವಯೋಮಿತಿ :
ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 55 ವರ್ಷ ವಯೋಮಿತಿಯೊಳಗಿರಬೇಕು.
ವಯೋಮಿತಿ ಸಡಿಲಿಕೆ : 
- ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ 
- ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ
- PwBD (OBC) ಅಭ್ಯರ್ಥಿಗಳಿಗೆ : 13 ವರ್ಷ 
- PwBD (SC/ST) ಅಭ್ಯರ್ಥಿಗಳಿಗೆ : 15 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.


ವಿದ್ಯಾರ್ಹತೆ : 
ಆಫೀಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಅಂಗೀಕೃತ ವಿಶ್ವವಿದ್ಯಾಲಯಗಳಿಂದ ತಾಂತ್ರಿಕ / ತಾಂತ್ರಿಕೇತರ ವಿಷಯಗಳಲ್ಲಿ ಪದವಿ/ ಸ್ನಾತಕೋತ್ತರ ಪದವಿ ಪಾಸ್‌ ಮಾಡಿರಬೇಕು.


ಅರ್ಜಿ ಶುಲ್ಕ :
ಸಾಮಾನ್ಯ ಅರ್ಹತೆ, ಒಬಿಸಿ ವರ್ಗದವರಿಗೆ ಅಪ್ಲಿಕೇಶನ್‌ ಶುಲ್ಕ ರೂ.1180.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದವರಿಗೆ ಅಪ್ಲಿಕೇಶನ್‌ ಶುಲ್ಕ ರೂ.118.
ಅರ್ಜಿ ಶುಲ್ಕವನ್ನು ಆನ್ ಲೈನ್ ನಲ್ಲಿ 

ಆಯ್ಕೆ ವಿಧಾನ : 
ಅರ್ಜಿ ಸಲ್ಲಿಸಿದವರಿಗೆ ಲಿಖಿತ ಪರೀಕ್ಷೆ, ಗುಂಪು ಚರ್ಚೆ, ಸಂದರ್ಶನ, ಭಾಷಾ ಜ್ಞಾನ, ಸ್ಕಿಲ್‌ ಟೆಸ್ಟ್‌, ಹೀಗೆ ಹಲವು ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.


ಸ್ಕೇಲ್‌ವಾರು ವೇತನ ಶ್ರೇಣಿ ಕೆಳಗಿನಂತಿರುತ್ತದೆ.
ಸ್ಕೇಲ್ VII ಹುದ್ದೆಗಳಿಗೆ ವೇತನ ಶ್ರೇಣಿ: Rs.156500 – 4340/4 – 173860.
ಸ್ಕೇಲ್ VI ಹುದ್ದೆಗಳಿಗೆ ವೇತನ ಶ್ರೇಣಿ: Rs.140500 – 4000/4 – 156500.
ಸ್ಕೇಲ್ V ಹುದ್ದೆಗಳಿಗೆ ವೇತನ ಶ್ರೇಣಿ: Rs.120940 – 3360/2 – 127660 – 3680/2 – 135020.
ಸ್ಕೇಲ್ IV ಹುದ್ದೆಗಳಿಗೆ ವೇತನ ಶ್ರೇಣಿ: Rs.102300 – 2980/4 – 114220 – 3360/2 – 120940.
ಸ್ಕೇಲ್ III ಹುದ್ದೆಗಳಿಗೆ ವೇತನ ಶ್ರೇಣಿ: Rs.85920 – 2680/5 – 99320 – 2980/2 - 105280.


ಈ ಮೇಲಿನ ಯಾವುದೇ ಸ್ಕೇಲ್‌ ಆಫೀಸರ್ ಹುದ್ದೆಗಳಿಗೆ ಅರ್ಹತೆ ಪಡೆದು ಆಯ್ಕೆ ಆದವರು 2 ವರ್ಷಗಳ ಪ್ರೊಬೇಷನ್‌ ಅವಧಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.

Comments