Loading..!

ಬೆಂಗಳೂರು ವಿಶ್ವವಿದ್ಯಾಲಯವು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ ಈ ಕುರಿತ ಮಾಹಿತಿ
| Date:24 ಜುಲೈ 2019
not found
ಬೆಂಗಳೂರು ವಿಶ್ವವಿದ್ಯಾಲಯವು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಎಂಸಿಎ (MCA) ಮತ್ತು ಗಣಕ ವಿಜ್ಞಾನ(Computer Science), ಸಮಾಜ ಕಾರ್ಯ ಮತ್ತು ವಿದ್ಯುನ್ಮಾನ ವಿಜ್ಞಾನ ವಿಷಯಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ನೆಟ್ / SET / ಪಿ.ಎಚ್.ಡಿ ಮಾಡಿರಬೇಕು.
ಸಮಾಜಕಾರ್ಯ ವಿಭಾಗದ ಹುದ್ದೆಗಳಿಗೆ ಜುಲೈ 20 ರೊಳಗೆ ಮತ್ತು ಎಂಸಿಎ ಮತ್ತು ಗಣಕ ವಿಜ್ಞಾನ ಹಾಗು ವಿದ್ಯುನ್ಮಾನ ವಿಜ್ಞಾನ ವಿಭಾಗದ ಹುದ್ದೆಗಳಿಗೆ ಜುಲೈ22 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಕೆಳಗೆ ತಿಳಿಸಿದ ವಿಭಾಗಗಳಲ್ಲಿ ಅಥಿತಿ ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದು ಅವುಗಳಿಗೆ ಅರ್ಜಿ ಸಲ್ಲಿಸುವ ಆರಂಭ ಮತ್ತು ಅಂತಿಮ ದಿನಾಂಕವನ್ನು ಇಲಾಖೆ ಮುಂದೆ ತಿಳಿಸಲಾಗಿದೆ ಅಭ್ಯರ್ಥಿಗಳು ಗಮನಿಸಬೇಕು.

* ಹಿಂದಿ ವಿಭಾಗ (12.07.2019-20.07.2019)
* ತತ್ವಶಾಸ್ತ್ರ (10.07.2019 – 18.07.2019)
* ರಾಮನಗರ ಸ್ನಾತಕೋತ್ತರ ಕೇಂದ್ರ(11.07.2019-20.07.2019)
* ಸಂಖ್ಯಾಶಾಸ್ತ್ರ (12.07.2019-31.07.2019)
* ಗಣಿತಶಾಸ್ತ್ರ (04.07.2019 – 15.07.2019)
* ಸಮಾಜಕಾರ್ಯ (04.07.2019-20.07.2019)
* ಎಂ.ಸಿ.ಎ ಮತ್ತು ಗಣಕ ವಿಜ್ಞಾನ (06.07.2019-22.07.2019
* ಪರಿಸರ ವಿಜ್ಞಾನ (04.07.2019 – 15.07.2019)
* ವಿದ್ಯುನ್ಮಾನ ವಿಜ್ಞಾನ (04.07.2019 – 22.07.2019)
* ಅನ್ವಯಿಕ ತಳಿಶಾಸ್ತ್ರ (02.07.2019 – 15.07.2019)
* ಪ್ರಾಣಿಶಾಸ್ತ್ರ (02.07.2019 – 15.07.2019)


ಅರ್ಜಿ ಸಲ್ಲಿಸಲು ವಿಳಾಸ :
ಆಯಾ ವಿಭಾಗ ಮುಖ್ಯಸ್ಥರು,
ಜ್ಞಾನಭಾರತಿ ಆವರಣ,
ಬೆಂಗಳೂರು ವಿಶ್ವ ವಿದ್ಯಾಲಯ,
ಬೆಂಗಳೂರು -560056
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments