Loading..!

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಅಹ್ವಾನ
Tags: Degree PG
Published by: Rukmini Krushna Ganiger | Date:3 ಸೆಪ್ಟೆಂಬರ್ 2021
not found
- ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರದಲ್ಲಿನ ವಿವಿಧ ಸ್ನಾತಕೋತ್ತರ ವಿಭಾಗಗಳ ಹಾಗೂ ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜು ಚಿಕ್ಕಬಳ್ಳಾಪುರ ಇಲ್ಲಿನ ಬೋಧನಾ ಕಾರ್ಯಭಾರದ ನಿರ್ವಹಣೆಗಾಗಿ 2021-22 ನೇ ಸಾಲಿಗೆ ಯುಜಿಸಿ ನಿಯಮಾನುಸಾರ ಪೂರ್ಣಕಾಲಿಕ ಅರೆಕಾಲಿಕ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಈ ಕೆಳಕಂಡ ವಿಷಯಗಳ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳು ಖಾಲಿ ಇರುವ ವಿಭಾಗಗಳು :

1. ಕಲಾ ನಿಖಾಯ: ಎಂ.ಎ. ಕನ್ನಡ, ಆಂಗ್ಲ ಭಾಷೆ, ಅರ್ಥಶಾಸ್ತ್ರ ರಾಜ್ಯಶಾಸ್ತ್ರ, ಪತ್ರಿಕೋಧ್ಯಮ & ಸಮೂಹ ಸಂವಹನ ಮತ್ತು ಸಮಾಜ ಕಾರ್ಯ (ಎಂ.ಎಸ್‌.ಡಬ್ಲ್ಯೂ).

2. ವಾಣಿಜ್ಯ ನಿಖಾಯ: ಎಂ.ಕಾಂ.

3. ವಿಜ್ಞಾನ ನಿಖಾಯ: ಎಂ.ಎಸ್ಸಿ ಸಸ್ಯಶಾಸ್ತ್ರ, ಗಣಕ ವಿಜ್ಞಾನ, ಭೌತಶಾಸ್ತ್ರ, ಗಣಿತಶಾಸ್ತ್ರ ೬ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ.

4. ಶಿಕ್ಷಣ ನಿಖಾಯ: ಬಿ.ಎಡ್‌.

ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಪಿ.ಹೆಚ್‌.ಡಿ/ ಎಂ.ಫಿಲ್‌/ ಎನ್‌.ಇ.ಟಿ/ ಎಸ್‌.ಎಲ್‌.ಇ.ಟಿ. 

- ಅತಿಥಿ ಉಪನ್ಯಾಸಕರ ಹುದ್ದೆಯು ಸಂಪೂರ್ಣ ತಾತ್ಕಾಲಿಕವಾಗಿರುತ್ತದೆ.


* ಅರ್ಹತೆ ಹೊಂದಿದ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಿಂದ ಅರ್ಜಿಯನ್ನು ಡೌನಲೋಡ್‌ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ಅಭ್ಯರ್ಥಿಗಳ ಅಂಕ ಪಟ್ಟಿ, ಪದವಿ ಪ್ರಮಾಣ ಪತ್ರ, ಸೇವಾನುಭವ ಪತ್ರ, ಪಿ.ಹೆಚ್‌.ಡಿ./ ಎಂ.ಫಿಲ್‌ / ಎನ್‌.ಇ.ಟೆ. / ಎಸ್‌.ಎಲ್‌.ಇ.ಟ್ಟಿ, ಸಂಶೋಧನ ಪತ್ರಿಕೆಗಳು (ದ್ವಿಪ್ರತಿಗಳಲ್ಲಿ). ಇತ್ಯಾದಿ ಅಗತ್ಯ ದಾಖಲಾತಿಗಳೊಂದಿಗೆ ಕುಲಸಚಿವರು, ವಿಶ್ವವಿದ್ಯಾಲಯದ ಆಡಳಿತ ಕಛೇರಿ, ಶ್ರೀ ದೇವರಾಜ ಅರಸು ಬಡಾವಣೆ, ಟಮಕ, ಕೋಲಾರ-563103 ಇಲ್ಲಿಗೆ ದಿನಾಂಕ: 08.09.2021ರ ಸಂಜೆ 5:00 ಗಂಟೆಯವರೆಗೆ ಸಲ್ಲಿಸತಕ್ಕದ್ದು.

ಸೂಚನೆ:

1) ಅತಿಥಿ ಉಪನ್ಯಾಸಕರ ಹುದ್ದೆಯು ಸಂಪೂರ್ಣವಾಗಿ ತಾತ್ಕಾಲಿಕವಾಗಿರುತ್ತದೆ.

2) ಆಯ್ಕೆಯಾದ ಅತಿಥಿ ಉಪನ್ಯಾಸಕರಿಗೆ ವಿಶ್ವವಿದ್ಯಾಲಯದ ನಿಯಮಾನುಸಾರ ಸೂಕ್ತ ಸಂಭಾವನೆಯನ್ನು ನೀಡಲಾಗುವುದು. 

3) ವಿವಿಧ ವಿಷಯಗಳ ಕಾರ್ಯಬಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸರ್ಕಾರದ ಮೀಸಲಾತಿಯನ್ನು ಅನುಸರಿಸಿ ಮಾಡಲಾಗುವುದು.

* ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾ ಲಯದ ದೂರವಾಣಿ ಸಂಖ್ಯೆ 08152-243132, ಅನ್ನು ಸಂರ್ಪಕಿಸುವುದು.

Comments