ಬಳ್ಳಾರಿ ಜಿಲ್ಲೆಯ ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕಡತ ಅನುಮೋದನೆ ಬಳ್ಳಾರಿ ಇವರಿಂದ ದಿನಾಂಕ: 01-10-2021 ರಂದು ಕಡತ ಅನುಮೋದನೆಯಂತೆ "National Programme for Prevention & Control of Cancer, Diabetes, Cardiovoascular Diseases and Stroke" & ಐ.ಡಿ.ಪಿ.ಎಸ್ / ಐ.ಎಚ್.ಐ.ಪಿ. ಕಾರ್ಯಕ್ರಮದ ಅಡಿಯಲ್ಲಿ ಬಳ್ಳಾರಿ ಜಿಲ್ಲೆಯ ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ಎಪಿಡಿಮೋಲಾಜಿಸ್ಟ ತಾಲ್ಲೂಕು ಆಸ್ಪತ್ರೆ / ಸಮುದಾಯ ಆರೋಗ್ಯ ಕೇಂದ್ರಗಳ ಎನ್.ಸಿ.ಡಿ ಕ್ಲಿನಿಕ್ ಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯಾಧಿಕಾರಿಗಳು, ಶುಶ್ರೂಷಕರು, ಆಪ್ತಸಮಾಲೋಚಕರ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಹೈ-ಕ 371 ಜೆ ನಿಯಾಮಗಳು ರೋಸ್ಟರ್-ಕಮ-ಮೆರಿಟ್ ಮತ್ತು ಒಳ ಮೀಸಲಾತಿ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ, ಆಸಕ್ತ ಅಭ್ಯರ್ಥಿಗಳು ದಿನಾಂಕ : 16-10-2021 ರಂದು ಬೆಳ್ಳಿಗ್ಗೆ 10.30 ರಿಂದ ಸಂಜೆ 05.00 ರ ವರೆಗೆ ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಿದೆ.
ನೇರ ಸಂದರ್ಶನ ನಡೆಯುವ ಸ್ಥಳ :
ಜಿಲ್ಲಾ ಎನ್.ಸಿ.ಡಿ / ಸರ್ವೇಕ್ಷಣಾ ಘಟಕ,
ಜಿಲ್ಲಾ ಆಸ್ಪತ್ರೆ ಆವರಣ, ಅನಂತಪುರ ರಸ್ತೆ, ಬಳ್ಳಾರಿ
Comments