ಬಳ್ಳಾರಿ ಜಿಲ್ಲಾ ಪಂಚಾಯತಿ ಆಯುಷ್ ಇಲಾಖೆಯ ಆಯುರ್ವೇದ ಆಸ್ಪತ್ರೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
Published by: Tajabi Pathan | Date:16 ಫೆಬ್ರುವರಿ 2023

ಬಳ್ಳಾರಿ ಜಿಲ್ಲಾ ಆಯುಷ್ ಇಲಾಖೆಯ, ರಾಷ್ಟೀಯ ಆಯುಷ್ ಅಭಿಯಾನದಡಿ (ಸಿ.ಎಸ್.ಸಿ) ಮೇಲ್ದರ್ಜೆಗೇರಿಸಲಾದ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಸಿರಗುಪ್ಪ ಮತ್ತು ಸಂಡೂರು ಗಳಲ್ಲಿ ಖಾಲಿ ಇರುವ ಮಲ್ಟಿ ಪರ್ಪಸ್ ವರ್ಕರ್, ಆಯುಷ್ ಔಷಧಿ ವಿತರಕರು, ಸ್ತ್ರೀರೋಗ ಅಟೆಂಡರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 20 ಫೆಬ್ರುವರಿ 2023 ರೊಳಗಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ :
ಜಿಲ್ಲಾ ಆಯುಷ್ ಕಛೇರಿ, ಕೆ.ಎಂ.ಎಫ್. ನಂದಿನಿ ಡೈರಿ ಎದುರುಗಡೆ,
ಕೊಳಗಲ್ಲು ರಸ್ತೆ, ಬಳ್ಳಾರಿ - 583101
No. of posts: 6
Comments