Loading..!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:31 ಜನವರಿ 2025
not found

ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೈಲಹೊಂಗಲವು ತನ್ನ ಶಾಖೆಗಳಲ್ಲಿ ಖಾಲಿ ಇರುವ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.


ಹುದ್ದೆಗಳ ವಿವರ :
ಕಿರಿಯ ಸಹಾಯಕರ ಹುದ್ದೆಗಳು : 06  
   - ವಿದ್ಯಾರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿ.ಯು.ಸಿ / ಬಿ.ಕಾಂ / ಬಿ.ಸಿ.ಎ / ಎಮ್.ಸಿ.ಎ / ಬಿ.ಇ  ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
   - ಕೌಶಲ್ಯ: ಕಂಪ್ಯೂಟರ್, ಬ್ಯಾಂಕಿಂಗ್, ಲೆಕ್ಕಶಾಸ್ತ್ರ, ವಹಿವಾಟು ಮತ್ತು ಮಾರ್ಕೆಟಿಂಗ್ ಪರಿಚಯ, ಕನ್ನಡ ಮತ್ತು ಇಂಗ್ಲಿಷ್ ಓದಲು, ಬರೆಯಲು, ಮಾತನಾಡಲು ಬರಬೇಕು.  
   - ವೇತನ ಶ್ರೇಣಿ: ₹27,650/- ರೂ ಗಳಿಂದ ₹52,650/- ರೂ ಗಳ ವರೆಗೆ  


ಕಛೇರಿ ಸಹಾಯಕರ (ಸಿಪಾಯಿ) ಹುದ್ದೆಗಳು - 02  
   - ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ/ಹತ್ತನೇ ತರಗತಿ ಉತ್ತೀರ್ಣ.  
   - ಕೌಶಲ್ಯ: ಕನ್ನಡ ಮತ್ತು ಇಂಗ್ಲಿಷ್ ಓದಲು, ಬರೆಯಲು, ತಿಳಿದುಕೊಳ್ಳಲು ಮತ್ತು ಮಾತನಾಡಲು ಬರಬೇಕು.  
   - ವೇತನ ಶ್ರೇಣಿ: 19,950/- ರೂ ಗಳಿಂದ 37,900/- ರೂ ಗಳ ವರೆಗೆ   


ಅರ್ಹತೆ :  
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷಗಳಾಗಿರಬೇಕು.

ವಯೋಮಿತಿ:

- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ - 1 :ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ
- ಸಾಮಾನ್ಯ ವರ್ಗದ ಅಭ್ಯರ್ಥಿಗಳು: 18 ರಿಂದ 35 ವರ್ಷ
- ಹಿಂದುಳಿದ ವರ್ಗದ ಅಭ್ಯರ್ಥಿಗಳು: 18 ರಿಂದ 38 ವರ್ಷ


ಅರ್ಜಿ ಶುಲ್ಕ :
- ಕಿರಿಯ ಸಹಾಯಕ ಹುದ್ದೆಗೆ : ₹1000/-  
- ಸಿಪಾಯಿ ಹುದ್ದೆಗೆ : ₹500/- ಅರ್ಜಿ ಶುಲ್ಕ  
- ಅರ್ಜಿ ಶುಲ್ಕವನ್ನು ಡಿ.ಡಿ/ಪೊಸ್ಟಲ್ ಆರ್ಡರನ್ನು"ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ್‌ ಲಿ . ಬೈಲಹೊಂಗಲ ಈ ಹೆಸರಿನಲ್ಲಿ ಪಾವತಿಯಾಗುವಂತೆ ನೀಡಬೇಕೆ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 50% ರಿಯಾಯತಿ ಇರಲಿದೆ.


ಆಯ್ಕೆ ಪ್ರಕ್ರಿಯೆ: ಲೇಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ
ಅರ್ಜಿ ಸಲ್ಲಿಕೆ ವಿಳಾಸ: ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಬೈಲಹೊಂಗಲ


  ಅರ್ಜಿ ಸಲ್ಲಿಕೆಗೆ ಮಹತ್ವದ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 31-01-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-02-2025

ಈ ಉದ್ಯೋಗಾವಕಾಶವನ್ನು ಬಳಸಿಕೊಂಡು ಅರ್ಹ ಅಭ್ಯರ್ಥಿಗಳು ತಮ್ಮ ಭವಿಷ್ಯ ನಿರ್ಮಿಸಿಕೊಳ್ಳಬಹುದು. 

Comments