ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ADA) ಯಲ್ಲಿ ಖಾಲಿ ಇರುವ100 ಮೆಕಾನಿಕಲ್/ಪ್ರೊಡಕ್ಷನ್/ ಮೆಟಲರ್ಜಿ ಮತ್ತು ಮೆಟೀರಿಯಲ್ ಸೈನ್ಸ್ ಎಂಜಿನಿರಿಂಗ್, ಏರೋನಾಟಿಕಲ್/ ಏರೋಸ್ಪೇಸ್ ಎಂಜಿನಿಯರಿಂಗ್/ ಸಿವಿಲ್ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ, ಆಯಾ ವಿಭಾಗಕ್ಕೆ ಅನುಗುಣವಾಗಿ ಸಂದರ್ಶನದ ದಿನಾಂಕವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
- ಮೆಕಾನಿಕಲ್/ ಪ್ರೊಡಕ್ಷನ್/ ಮೆಟಲರ್ಜಿ ಮತ್ತು ಮೆಟೀರಿಯಲ್ ಸೈನ್ಸ್ ಎಂಜಿನಿರಿಂಗ್ 23 ಹುದ್ದೆಗಳಿಗೆ :04 ಸೆಪ್ಟೆಂಬರ್ 2023
- ಏರೋನಾಟಿಕಲ್/ ಏರೋಸ್ಪೇಸ್ ಎಂಜಿನಿಯರಿಂಗ್/ ಸಿವಿಲ್ ಎಂಜಿನಿಯರಿಂಗ್ 4 ಹುದ್ದೆಗಳಿಗೆ : 07 ಸೆಪ್ಟೆಂಬರ್ 2023
- ಕಂಪ್ಯೂಟರ್ ಸೈನ್ಸ್/ ಇನ್ಫೋಟೆಕ್/ ಇನ್ಫೋ ಸೈನ್ಸ್ 25 ಹುದ್ದೆಗಳಿಗೆ : 11 ಸೆಪ್ಟೆಂಬರ್ 2023
- ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್/ ಟೆಲಿಕಮ್ಯುನಿ ಕೇಷನ್/ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸುಮೆಂಟೇಶನ್ 48 ಹುದ್ದೆಗಳಿಗೆ : 14 ಸೆಪ್ಟೆಂಬರ್ 2023
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ಮೂಲ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸುವ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ.
ಸಂದರ್ಶನ ನಡೆಯುವ ಸ್ಥಳ :
ADA Campus-2, Suranjandas Road,
New Thippasandra Post, Bengaluru-560075
Comments