ಕರ್ನಾಟಕ ರಾಜ್ಯದಲ್ಲಿ ಖಾಲಿಯಿರುವ ಒಟ್ಟು ಎರಡೂವರೆ ಲಕ್ಷ ಸರ್ಕಾರೀ ಹುದ್ದೆಗಳನ್ನೂ ಶೀಘ್ರದಲ್ಲೇ ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗಳಿಗೆ ಇತ್ತೀಚಿಗೆ ಮಾಹಿತಿ ನೀಡಿದ್ದಾರೆ. ಪ್ರಿಯಾಂಕ್ ಖರ್ಗೆ, 'ಯಾವುದೇ ಯೋಜನೆ/ ಭತ್ಯೆಯನ್ನು ಜೀವನಪೂರ್ತಿ ನೀಡುವುದಕ್ಕೆ ಆಗುವುದಿಲ್ಲ. ಹಾಗಾಗಿ, ಉದ್ಯೋಗಗಳನ್ನು ಸೃಷ್ಟಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಖಾಲಿಯಿರುವ ಎರಡೂವರೆ ಲಕ್ಷ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುತ್ತೇವೆ. ಆ ಮೂಲಕ ರಾಜ್ಯದಲ್ಲಿ ನಿರುದ್ಯೋಗ ನಿರ್ಮೂಲನೆ ಮಾಡುತ್ತೇವೆ' ಎಂದು ತಿಳಿಸಿದ್ದಾರೆ.
ಸ್ನೇಹಿತರೆ, ಈ ಖಾಲಿ ಇರುವ ಹುದ್ದೆಗಳಿಗೆ ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆಯು ಚಾಲನೆಗೊಳ್ಳುವ ಸಾಧ್ಯತೆಯಿದ್ದು, ನೀವು ಛಲ ಬಿಡದೆ ನಿಮ್ಮ ತಯಾರಿಯನ್ನು ಮುಂದುವರೆಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ...ALL THE BEST
Comments