Loading..!

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
Published by: Yallamma G | Date:24 ಫೆಬ್ರುವರಿ 2025
Image not found

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (UAS) ಧಾರವಾಡದಲ್ಲಿ ಖಾಲಿ ಇರುವ ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಹತೆ ಹೊಂದಿರುವ ಮತ್ತು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಆಸಕ್ತ ಅಭ್ಯರ್ಥಿಗಳು 05/03/2025 ರಂದು ಬೆಳಿಗ್ಗೆ 10:30 ಕ್ಕೆ ನಡೆಯುವ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು.


ಹುದ್ದೆಯ ವಿವರಗಳು :
ಹುದ್ದೆಯ ಹೆಸರು: ಪ್ರೋಗ್ರಾಂ ಮ್ಯಾನೇಜರ್
ಹುದ್ದೆಗಳ ಸಂಖ್ಯೆ: 1
ಕೆಲಸದ ಸ್ಥಳ: ಧಾರವಾಡ, ಕರ್ನಾಟಕ
ವೇತನ: ಪ್ರತಿ ತಿಂಗಳು ರೂ. 40,000/-


ಅರ್ಹತಾ ವಿವರಗಳು :
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಎಂಬಿಎ (MBA) ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.


ವಯೋಮಿತಿ : UAS ಧಾರವಾಡ ನಿಯಮಾವಳಿಗಳ ಪ್ರಕಾರ


ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನ


ಸಂದರ್ಶನದ ವಿವರಗಳು :
ದಿನಾಂಕ: 05/03/2025
ಸಮಯ: ಬೆಳಿಗ್ಗೆ 10:30 ಕ್ಕೆ
ಸ್ಥಳ: ASTRA ಕಚೇರಿ, II ಮಹಡಿ, KRISHIK-ಅಗ್ರಿ ಬಿಸಿನೆಸ್ ಇಂಕ್ಯುಬೇಟರ್ ಮೇಲ್ಭಾಗ, ಆಡಳಿತ ಭವನ, UAS ಧಾರವಾಡ, ಧಾರವಾಡ, ಕರ್ನಾಟಕ.

ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ಸಂದರ್ಶನ ಸ್ಥಳಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ, UAS ಧಾರವಾಡ ಅಧಿಕೃತ ವೆಬ್‌ಸೈಟ್ uasd.edu ಗೆ ಭೇಟಿ ನೀಡಿ.

Comments