ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ.. ಅರ್ಜಿ ಆಹ್ವಾನ
| Date:4 ಡಿಸೆಂಬರ್ 2019
Image not found
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪೋಸ್ಟ್‌ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ (2018-19) ಮೊದಲ ಪ್ರಯತ್ನದಲ್ಲಿ, ಪ್ರಥಮ ಶ್ರೇಯಾಂಕದಲ್ಲಿ ಪಾಸ್‌ ಆದ ವಿದ್ಯಾರ್ಥಿಗಳು ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಬಹುದು.
ಸೋಶಿಯಲ್ ವೆಲ್‌ಫೇರ್ ಡಿಪಾರ್ಟ್‌ಮೆಂಟ್ ವಿದ್ಯಾರ್ಥಿ ಪ್ರೋತ್ಸಾಹಧನಕ್ಕಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಶಿಕ್ಷಣ ಪಡೆದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಬಹುದು.

ಆನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ : 15-12-2019

✍ ಪ್ರೋತ್ಸಾಹಧನ ವಿವರ
# ದ್ವಿತೀಯ ಪಿಯುಸಿ, 3 ವರ್ಷದ ಡಿಪ್ಲೊಮಾ ಕೋರ್ಸ್‌ ಪೂರ್ಣಗೊಳಿಸಿದವರಿಗೆ : ರೂ.20,000
# ಯಾವುದೇ ಪದವಿ ಕೋರ್ಸ್‌ ಪೂರ್ಣಗೊಳಿಸಿದವರಿಗೆ : ರೂ.25,000
# ಯಾವುದೇ ಸ್ನಾತಕೋತ್ತರ ಪದವಿ (ಎಂಎ, ಎಂಎಸ್ಸಿ, ಇತರೆ) : ರೂ.30,000
# ಕೃಷಿ, ಎಂಜಿನಿಯರಿಂಗ್, ವೆಟೆರಿನರಿ, ಮೆಡಿಷನ್ : ರೂ.35000

✍ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
- ಎಸ್‌ಎಸ್‌ಎಲ್‌ಸಿ ರಿಜಿಸ್ಟ್ರೇಷನ್ ನಂಬರ್
- ಆಧಾರ್ ನಂಬರ್ ಮತ್ತು ಹೆಸರು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ RD ನಂಬರ್
- ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್‌ ಅಳತೆಯ ಫೋಟೊಗಳು
- ಸಂಬಂಧಿಸಿದ ಶೈಕ್ಷಣಿಕ ದಾಖಲೆಯ ಸ್ಕ್ಯಾನ್‌ ಕಾಪಿ
- ಆಧಾರ್ ಲಿಂಕ್‌ ಮಾಡಿದ ಬ್ಯಾಂಕ್ ಖಾತೆ ವಿವರ

✍ ಸೂಚನೆ: ಆನ್‌ಲೈನ್‌ ಅರ್ಜಿ ಸಲ್ಲಿಸುವ ವೇಳೆ ಅಭ್ಯರ್ಥಿಗಳ ಶಾಲೆ, ಕಾಲೇಜುಗಳು ಪಟ್ಟಿಯಲ್ಲಿ ಬರಲಿಲ್ಲ ಎಂದಲ್ಲಿ, ಅಂತಹ ಅಭ್ಯರ್ಥಿಗಳು ತಮ್ಮ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು, ಪ್ರೋತ್ಸಾಹಧನ ಪೋರ್ಟಲ್‌ಗೆ ಕಾಲೇಜು ಹೆಸರು ಸೇರಿಸಲು ತಿಳಿಸಿಬಹುದು.
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments