Loading..!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ 13735 ವಿವಿಧ ಹುದ್ದೆಗಳ ನೇಮಕಾತಿಯ ಪರೀಕ್ಷಾ ಪ್ರವೇಶ ಪತ್ರ ಇದೀಗ ಪ್ರಕಟ | ಈ ಕುರಿತು ಮಾಹಿತಿ ನಿಮಗಾಗಿ
Published by: Bhagya R K | Date:15 ಫೆಬ್ರುವರಿ 2025
Image not found

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 17/12/2024 ರಂದು 13,735  ಜೂನಿಯರ್ ಅಸೋಸಿಯೇಟ್- ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್ (SBI Clerk) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರೀಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು SBI ಯು ಪರೀಕ್ಷಾ ಪ್ರವೇಶ ಪತ್ರವನ್ನು ಇದೀಗ ತನ್ನ ಜಾಲತಾಣದಲ್ಲಿ ಪ್ರಕಟಿಸಿ, ಪರೀಕ್ಷಾ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಇದೀಗ ಅವಕಾಶ ಕಲ್ಪಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನೂ ಡೌನ್ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಈಗಿನಿಂದಲೇ ಉತ್ತಮ ತಯಾರಿ ಆರಂಭಿಸಿ ಯಶಸ್ವಿಯಾಗಿ.   


    ಇದೀಗ ನೇಮಕಾತಿಯ ಮೊದಲನೇ ಹಂತವಾಗಿ ಪರೀಕ್ಷೆಯನ್ನು ಪರೀಕ್ಷೆಯನ್ನು ಫೆಬ್ರವರಿ 22, 27, 28 ಮತ್ತು ಮಾರ್ಚ್ 1, 2025 ರಂದು ನಡೆಸಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೌಸ್ ಟಿಕೆಟ್‌ ಡೌನ್‌ಲೋಡ್ ಮಾಡುವ ಲಿಂಕ್ ಅನ್ನು ಫೆಬ್ರವರಿ 10, 2025 ರಂದು ಪ್ರಕಟಿಸಲಾಗಿದೆ.


ಪರೀಕ್ಷೆಯ ಪ್ರಮುಖ ಅಂಶಗಳು:
- ಈ ಪರೀಕ್ಷೆ ಒಟ್ಟು 100 ಅಂಕಗಳಿಗೆ ನಡೆಯಲಿದೆ.
- ಪರೀಕ್ಷೆಯ ಅವಧಿ ಒಟ್ಟು 1 ಗಂಟೆ.
- ಪ್ರಶ್ನೆಪತ್ರಿಕೆಯಲ್ಲಿ 3 ವಿಭಾಗಗಳು ಇರುತ್ತವೆ:
  1. ಇಂಗ್ಲಿಷ್ ಲ್ಯಾಂಗ್ವೇಜ್
  2. ನ್ಯೂಮೆರಿಕಲ್ ಅಬಿಲಿಟಿ
  3. ರೀಜನಿಂಗ್ ಅಬಿಲಿಟಿ
- ಪ್ರತಿಯೊಂದು ತಪ್ಪು ಉತ್ತರಕ್ಕೆ 1/4 ಅಂಕ ಕಡಿತಗೊಳ್ಳಲಿದೆ.


- ಪ್ರವೇಶ ಪತ್ರ ಡೌನ್‌ಲೋಡ್ ಮಾಡುವ ವಿಧಾನ:
1. sbi.co.in ವೆಬ್‌ಸೈಟ್‌ಗೆ ಭೇಟಿ ನೀಡಿರಿ.
2. ಕ್ಯಾರಿಯರ್ ಪೋರ್ಟಲ್‌ಗೆ ತೆರಳಿ.
3. ಪ್ರಸ್ತುತ ಹುದ್ದೆಗಳ ಪೇಜ್ ತೆರೆಯಿರಿ ಮತ್ತು ಜೂನಿಯರ್ ಅಸೋಸಿಯೇಟ್ ವಿಭಾಗವನ್ನು ಆರಿಸಿ.
4. ಪ್ರೀಲಿಮಿನರಿ ಪರೀಕ್ಷೆಯ ಪ್ರವೇಶ ಪತ್ರದ ಲಿಂಕ್ ಕ್ಲಿಕ್ ಮಾಡಿ.
5. ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ.
6. ವಿವರಗಳನ್ನು ಸಲ್ಲಿಸಿ ಮತ್ತು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ.


ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ತಕ್ಷಣವೇ ಡೌನ್‌ಲೋಡ್ ಮಾಡಿಕೊಂಡು, ಪರೀಕ್ಷೆಗೆ ಪೂರ್ಣ ಸಿದ್ಧತೆ ನಡೆಸಲು ಸಲಹೆ ನೀಡಲಾಗಿದೆ.

Comments