Loading..!

ಲೋಕೋಪಯೋಗಿ ಇಲಾಖೆಯಲ್ಲಿ 870 ಹುದ್ದೆಗಳ ಜೂನ್‌ 22ರಿಂದ 24ರ ವರೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಕರೆಪತ್ರವನ್ನು ಪ್ರಕಟಿಸಲಾಗಿದೆ.
| Date:18 ಜೂನ್ 2019
Image not found
ಲೋಕೋಪಯೋಗಿ ಇಲಾಖೆಯಲ್ಲಿ 870 ಹುದ್ದೆಗಳ ಜೂನ್‌ 22ರಿಂದ 24ರ ವರೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಕರೆಪತ್ರವನ್ನು ಪ್ರಕಟಿಸಲಾಗಿದೆ.
ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿಯಿರುವ 570 ಗ್ರೂಪ್‌ ಬಿ ದರ್ಜೆಯ ಸಹಾಯಕ ಎಂಜಿನಿಯರ್‌ (ಗ್ರೇಡ್‌-1) ಹುದ್ದೆ ಹಾಗೂ ಗ್ರೂಪ್‌ ಸಿ ದರ್ಜೆಯ 300 ಕಿರಿಯ ಎಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ಜೂನ್‌ 22 ರಿಂದ ಜೂನ್‌ 24 ರವರೆಗೆ ನಡೆಯಲಿದೆ.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಭ್ಯರ್ಥಿಗಳಿಗೆ ಕರೆಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲಾಖಾ ವೆಬ್ಸೈಟ್ ನಲ್ಲಿ ತಿಳಿಸಲಾಗಿದೆ.


ಕಿರಿಯ ಇಂಜಿನಿಯರ್‌
==============
ಜೂನ್‌ 22, 2019 ರಂದು ಕಿರಿಯ ಇಂಜಿನಿಯರ್‌ ಹುದ್ದೆಗೆ ಪರೀಕ್ಷೆ ನಡೆಯಲಿದೆ. 2 ಪೇಪರ್‌ಗಳಿದ್ದು, 1 ಸಾಮಾನ್ಯ ಜ್ಞಾನ, 2 ತಾಂತ್ರಿಕ ಪತ್ರಿಕೆ ಇರಲಿದೆ. ಸಾಮಾನ್ಯ ಜ್ಞಾನ ಪೇಪರ್‌ ಪರೀಕ್ಷೆಯು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿದೆ. ತಾಂತ್ರಿಕ ಪತ್ರಿಕೆ ಪರೀಕ್ಷೆಯು ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ನಡೆಯಲಿದೆ.

ಸಹಾಯಕ ಇಂಜಿನಿಯರ್‌ ಗ್ರೇಡ್‌ - 1
==================
ಜೂನ್‌ 23, 2019 ರಂದು ಸಹಾಯಕ ಇಂಜಿನಿಯರ್‌ ಗ್ರೇಡ್‌ -1 ಪರೀಕ್ಷೆ ನಡೆಯಲಿದ್ದು, ಸಾಮಾನ್ಯ ಜ್ಞಾನ ಮತ್ತು ತಾಂತ್ರಿಕ ಪತ್ರಿಕೆ ಎಂಬ 2 ಪರೀಕ್ಷೆಗಳು ನಡೆಯಲಿವೆ. ಸಾಮಾನ್ಯ ಜ್ಞಾನ ಪೇಪರ್‌ ಪರೀಕ್ಷೆಯು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿದೆ. ತಾಂತ್ರಿಕ ಪತ್ರಿಕೆ ಪರೀಕ್ಷೆಯು ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ನಡೆಯಲಿದೆ.

ಸಹಾಯಕ ಇಂಜಿನಿಯರ್‌ ಗ್ರೇಡ್‌ -1 ಅಥವಾ ಕಿರಿಯ ಇಂಜಿನಿಯರ್‌
=======================================
ಜೂನ್‌ 24, 2019 ರಂದು ಸಹಾಯಕ ಇಂಜಿನಿಯರ್‌ ಗ್ರೇಡ್‌ -1 ಅಥವಾ ಕಿರಿಯ ಇಂಜಿನಿಯರ್‌ ಹುದ್ದೆಗೆ ಪರೀಕ್ಷೆ ನಡೆಯಲಿದೆ. ಕನ್ನಡ ಭಾಷಾ ಪರೀಕ್ಷೆ (ವಿವರಾಣತ್ಮಕ ಲಿಖಿತ ಪರೀಕ್ಷೆ)ಯು ಬೆಳಗ್ಗೆ 10.30ರಿಂದ ಮಧ್ಯಾನ್ಹ 12.30ರ ವರೆಗೆ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:
===================
https://cetonline.karnataka.gov.in/kea/PWD2019.aspx
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments