Loading..!

PUC CET ಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಮೂಲ ದಾಖಲಾತಿ ಪರಿಶೀಲನೆ ಕುರಿತ ಮಾಹಿತಿ
| Date:31 ಮೇ 2019
Image not found
Karnataka PUC CET Document Verification :
ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧೀಕಾರ (KEA)ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಕಾರ್ಯ ನಾಳೆ (ಜೂನ್ 1)ಯಿಂದ ಪ್ರಾರಂಭವಾಗಲಿದೆ .ಈ ಸಂಬಂಧ ಅಧಿಸೂಚನೆಯನ್ನು KEA ಪ್ರಕಟಿಸಿದೆ .ಇದರಂತೆ ,ಜೂನ್ 1ರಂದು ವಿಶೇಷ ಕೆಟಗರಿಯಲ್ಲಿರುವ ಅಂಗವಿಕಲ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ಮಲ್ಲೇಶ್ವರದ KEA ಆವರಣದಲ್ಲಿ ಬೆಳಗ್ಗೆ 11 ರಿಂದ ನಡೆಯಲಿದೆ .ಇದೇ ರೀತಿ ವಿಶೇಷ ಕೆಟಗರಿಯಲ್ಲಿರುವ NCC, ಕ್ರೀಡೆ, ಸೇನೆ, ಮಾಜಿ ಸೈನಿಕ,ಸ್ಕೌಟ್ ಗೈಡ್ಸ್ ,ಸಿಎಪಿಎಫ್,ಮಾಜಿ ಸಿಎಪಿಎಫ್,ಎಜಿಎಲ್ ನ ಅರ್ಹ ಮತ್ತು ಈ ಅರ್ಹತೆ ಇಲ್ಲದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಜೂನ್4ರಂದು ಪ್ರಕಟವಾಗಲಿದೆ ಪರಿಶೀಲನೆ.

ದಾಖಲೆ ಪರಿಶೀಲನೆ: ಜನರಲ್ ಮೆರಿಟ್ ಮೀಸಲು ಕೆಟಗರಿ,ವಿಶೇಷ ಕೆಟಗರಿಯ ಎಲ್ಲ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಜೂನ್ 6 ರಿಂದ ಪ್ರಾರಂಭವಾಗಲಿದ್ದು, ಜೂನ್ 19 ರ ತನಕ ನಡೆಯಲಿದೆ. ಅಭ್ಯರ್ಥಿಗಳು ಆಯಾ ಜಿಲ್ಲೆಗಳ ಸಹಾಯವಾಣಿ ಕೇಂದ್ರಗಳಲ್ಲಿ ದಾಖಲೆ ಪರಿಶೀಲನೆಗೆ ಹಾಜರಾಗಬಹುದು. ಹೊರನಾಡು,ಗಡಿನಾಡು ಕನ್ನಡಿಗ ಮತ್ತು ಜಮ್ಮು-ಕಾಶ್ಮೀರ ವಲಸಿಗ ಅಭ್ಯರ್ಥಿಗಳು ಬೆಂಗಳೂರಿನ ಕೇಂದ್ರದಲ್ಲಿ ತಮ್ಮ ರಾಂಕ್ ಗೆ ಅನುಗುಣವಾಗಿ ದಾಖಲಾತಿ ಪರಿಶೀಲನೆಗೆ ಒಳಪಡಿಸಬೇಕು.
Karnataka PUC CET Document Verification
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಭಾರತದ ಸಂವಿಧಾನದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments