ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕರ ಮತ್ತು ಬಾಲಕಿಯರ ಸಾಮಾನ್ಯ ಹಾಗೂ ಮಾದರಿ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ/ ಪ್ರ ವರ್ಗ ಮತ್ತು ಇತರೆ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ 2018-19 ನೇ ಸಾಲಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹಿಂದುಳಿದ ವರ್ಗಗಳ ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಸೂಚನೆಗಳು :
1.ವಿದ್ಯಾರ್ಥಿಗಳು ಹಿಂದುಳಿದ ವರ್ಗಗಕ್ಕೆ ಸೇರಿದ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿರಬೇಕು.
2.ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯಮಿತಿ ಪ್ರವರ್ಗ-1 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ- ರೂ.1.00 ಲಕ್ಷ ಒಳಗಿರಬೇಕು.
3.ವಿದ್ಯಾರ್ಥಿಗಳು ಕಡ್ಡಾಯವಾಗಿ ಆನ್‍ಲೈನ್‍ನಲ್ಲಿಯೇ ಅರ್ಜಿ ಸಲ್ಲಿಸಬೇಕು.
4.ಆನ್‍ಲೈನ್ ಅರ್ಜಿಯಲ್ಲಿ ಎಸ್.ಎಸ್.ಎಲ್.ಸಿ ರಿಜಿಸ್ಟರ್ ಸಂಖ್ಯೆ, ಪಾಸಾದ ವರ್ಷ, ಹುಟ್ಟಿದ ದಿನಾಂಕವನ್ನು ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿರುವಂತೆಯೇ ನಮೂದಿಸಬೇಕು.
5.ವಿದ್ಯಾರ್ಥಿಯು ಪ್ರವೇಶ ಪಡೆದಿರುವ ಕಾಲೇಜು, ತಾಲ್ಲೂಕು, ಜಿಲ್ಲೆ, ವಿಶ್ವವಿದ್ಯಾನಿಲಯ, ಬೋರ್ಡ್/ಮಂಡಳಿ, ಪ್ರವೇಶದ ವಿಧಾನ, ಕೋರ್ಸಿನ ವಿವರ, ಪ್ರವೇಶದ ವಿವರ ಹಾಗೂ ಹಿಂದಿನ ತರಗತಿ/ಕೋರ್ಸಿನಲ್ಲಿ ಪಡೆದ ಅಂಕಗಳ ವಿವರವನ್ನು ತಪ್ಪಿಲ್ಲದಂತೆ ನಮೂದಿಸಬೇಕು.
6.ಎಸ್.ಎಸ್.ಎಲ್.ಸಿ ನಂತರದ ಕೋರ್ಸಿಗೆ (1ನೇ ಪಿ.ಯು.ಸಿ, 1ನೇ ಡಿಪ್ಲಮಾ, 1ನೇ ಐ.ಟಿ.ಐ ಇತ್ಯಾ ಕೋರ್ಸುಗಳಿಗೆ ಮಾತ್ರ)ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಿಂದಿನ ತರಗತಿಯಲ್ಲಿ ಓದುತ್ತಿದ್ದ ಶಾಲೆಯಿಂದ SATS (Student Achievement Tracking System) ಪಡೆದುಕೊಂಡು SATS ಅಂಕಣದಲ್ಲಿನ ಕಡ್ಡಾಯವಾಗಿ ಅಳವಡಿಸುವುದು
7.ಇದುವರೆಗೆ ಫಲಿತಾಂಶ ಪ್ರಕಟಗೊಳ್ಳದೇ ಇರುವ ಕೋರ್ಸುಗಳ ವಿದ್ಯಾರ್ಥಿಗಳು ಮಾತ್ರ ಆನ್ ಲೈನ್ ಅರ್ಜಿಯಲ್ಲಿ Complete Result Awaited ಬಟನ್ ಕ್ಲಿಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ (ಇಂತಹ ವಿದ್ಯಾರ್ಥಿಗಳು ಫಲಿತಾಂಶ ಬಂದ ತಕ್ಷಣವೇ ಅರ್ಜಿಯ ಇನ್ನೊಂದು ಪ್ರತಿಯೊಂದಿಗೆ ಅಂಕಪಟ್ಟಿಯನ್ನು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಛೇರಿಗೆ ತಲುಪಿಸಿ ಸ್ವೀಕೃತಿ ಪಡೆಯುವುದು. ಅಂಕಪಟ್ಟಿಯನ್ನು ಸಲ್ಲಿಸದೇ ಇದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.)
8.ವಿದ್ಯಾರ್ಥಿಯು ಪ್ರವೇಶ ಪಡೆದಿರುವ ಕಾಲೇಜಿನಿಂದ ಸ್ವಂತ ಸ್ಥಳಕ್ಕೆ ಕನಿಷ್ಠ 5 ಕಿ.ಮೀ ದೂರದ ವಿದ್ಯಾರ್ಥಿಗಳಾಗಿರಬೇಕು. ಕಾಲೇಜಿನಿಂದ ಸ್ವಂತ ಸ್ಥಳಕ್ಕೆ ಇರುವ ದೂರವನ್ನು ಕಿ.ಮೀ.ಗಳಲ್ಲಿ ನಮೂದಿಸಬೇಕು.
9.ವಿದ್ಯಾರ್ಥಿ ಪಡೆದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ಸಂಖ್ಯೆಯನ್ನು ನಮೂದಿಸಿ, View ಬಟನ್ Click ಮಾಡಿ ನೀವು ಪಡೆದಿರುವ ಪ್ರಮಾಣ ಪತ್ರದಲ್ಲಿರುವ ಅಂಕಿ ಅಂಶಗಳಂತೆ ಇರುವುದನ್ನು ಖಾತರಿಪಡಿಸಿಕೊಳ್ಳುವುದು(ಆದಾಯ ಪ್ರಮಾಣ ಪತ್ರವನ್ನು ಉದ್ಯೋಗಕ್ಕಾಗಿ ಪಡೆದಿರುವುದನ್ನು ಸ್ವೀಕರಿಸುವುದಿಲ್ಲ.)ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಶಿಕ್ಷಣಕ್ಕಾಗಿ ಪಡೆದಿರಬೇಕು.
10.ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಒಂದೇ ಪತ್ರದಲ್ಲಿ ನೀಡಿದ್ದಲ್ಲಿ, ಅರ್ಜಿಯಲ್ಲಿನ ಜಾತಿ ಅಥವಾ ಅದಾಯ ಕಲಂನ ಯಾವುದಾದರು ಒಂದರಲ್ಲಿ ಭರ್ತಿ ಮಾಡುವುದು.
11.ವಿದ್ಯಾರ್ಥಿಯ ಧರ್ಮ, ಜಾತಿ, ಪ್ರವರ್ಗ ಹಾಗೂ ಜಾತಿ&ಆದಾಯ ಪ್ರಮಾಣ ಪತ್ರ ಪಡೆದ ದಿನಾಂಕ ಹಾಗೂ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ, ಪೋಷಕರ ವೃತ್ತಿಯನ್ನು ಕಡ್ಡಾಯವಾಗಿ ನಮೂದಿಸಬೇಕು.
12.ವಿದ್ಯಾರ್ಥಿಯು ವಿಕಲಚೇತನ ಹಾಗೂ ಅಂಧ ವಿದ್ಯಾರ್ಥಿಗಳಾಗಿದ್ದಲ್ಲಿ, Yes ಎಂದು ನಮೂದಿಸಬೇಕು.
13.ವಿದ್ಯಾರ್ಥಿಯು ಈ ಹಿಂದಿನ ಸಾಲಿನಲ್ಲಿ Govt. of India, Govt. of Karnataka, Donors Scholorships, ಇತರೆ ಯಾವುದೇ ವಿದ್ಯಾರ್ಥಿ ವೇತನವನ್ನು ಪಡೆಯುತ್ತಿದ್ದಲ್ಲಿ Yes ಎಂದು ನಮೂದಿಸಬೇಕು.
14.ಕುಟುಂಬದ ಸದಸ್ಯರಲ್ಲಿ ಇಬ್ಬರಿಗಿಂತ ಹೆಚ್ಚು ಜನ ಶುಲ್ಕ ವಿನಾಯಿತಿ, ಪಡೆಯುತ್ತಿದ್ದಲ್ಲಿ Govt. of India, Govt. of Karnataka, Donors Scholorships, ಇತರೆ ಎಂಬ ವಿವರವನ್ನು ನಮೂದಿಸಬೇಕು.
15.ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಆಧಾರ್ ಕಾರ್ಡ್‍ಗಾಗಿ ಅರ್ಜಿಸಲ್ಲಿಸಿದ ನಂತರ ನೀಡುವ EID ಸಂಖ್ಯೆಯನ್ನು ನಮೂದಿಸುವುದು. (ನಿಮ್ಮ ಆಧಾರ್ ಸಂಖ್ಯೆಯು ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರತಕ್ಕದ್ದು)
16.ವಿದ್ಯಾರ್ಥಿಯು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ತೆರೆದಿರುವ ಬ್ಯಾಂಕ್ ಖಾತೆಯ ಸಂಖ್ಯೆ, ಐ.ಎಫ್.ಎಸ್.ಸಿ ಕೋಡ್ ಇತ್ಯಾದಿಗಳನ್ನು ನಮೂದಿಸಬೇಕು.(ನಿಮ್ಮ ಬ್ಯಾಂಕ್ ಖಾತೆಯು ನಿಮ್ಮ ಆಧಾರ್ ಸಂಖ್ಯೆಗೆ ಕಡ್ಡಾಯವಾಗಿ ಲಿಂಕ್ ಆಗಿರತಕ್ಕದ್ದು)
17.ವಿದ್ಯಾರ್ಥಿಯು ಪತ್ರ ವ್ಯವಹಾರಕ್ಕಾಗಿ ನೀಡುವ ವಿಳಾಸ ಹಾಗೂ ವಿದ್ಯಾರ್ಥಿಯ ಖಾಯಂ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿವರಗಳನ್ನು ನಮೂದಿಸಬೇಕು.
18.ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಗಳಾದಲ್ಲಿ bcwd.hostels@karnataka.gov.in ಗೆ ಇ-ಮೇಲ್ ಮುಖಾಂತರ ದಾಖಲೆಗಳೊಂದಿಗೆ ಸಂಪರ್ಕಿಸುವುದು.
ಆನ್‍ಲೈನ್‍ನಲ್ಲಿ ಕಡ್ಡಾಯವಾಗಿ ಅಪ್‍ಲೋಡ್ ಮಾಡಬೇಕಾದ ದಾಖಲಾತಿಗಳು :
ಈ ಕೆಳಕಂಡ ದಾಖಲಾತಿಗಳ ಮೂಲ ಪ್ರತಿಯಲ್ಲಿಯೇ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡತಕ್ಕದ್ದು.
1. ತಹಶೀಲ್ದಾರ/ಉಪ ತಹಸೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಒಮ್ಮೆ ಪಡೆದ ಆದಾಯ ಪ್ರಮಾಣ ಪತ್ರ 5 ವರ್ಷ ಚಾಲ್ತಿಯಲ್ಲಿರುತ್ತದೆ. ಜಾತಿ ಪ್ರಮಾಣ ಪತ್ರ ಶಾಶ್ವತವಾಗಿರುತ್ತದೆ.) ಮತ್ತು (ಆದಾಯ ಪ್ರಮಾಣ ಪತ್ರವನ್ನು ಉದ್ಯೋಗಕ್ಕಾಗಿ ಪಡೆದಿರುವುದನ್ನು ಸ್ವೀಕರಿಸುವುದಿಲ್ಲ.)ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ವಿದ್ಯಾಬ್ಯಾಸಕ್ಕಾಗಿ ಪಡೆದಿರಬೇಕು.
2. ಸಂಬಂಧಪಟ್ಟ ಶಾಲಾ-ಕಾಲೇಜುಗಳಿಂದ ನೀಡಲಾದ ವರ್ಗಾವಣೆ ಪ್ರಮಾಣ ಪತ್ರ
3. ಆಧಾರ್ ಕಾರ್ಡ್ ಅಥವಾ ಇ.ಐಡಿ. ನಂಬರ್ ಪ್ರತಿ,
4. ಎಸ್.ಎಸ್.ಎಲ್.ಸಿ ಅಂಕಪಟ್ಟಿ ಹಾಗೂ ಹಿಂದಿನ ತರಗತಿ/ಕೋರ್ಸುಗಳ ಅಂಕಪಟ್ಟಿ.
5. ಬ್ಯಾಂಕ್ ಪಾಸ್‍ಬುಕ್‍ನ ಮೊದಲ ಪುಟ (ವಿವರಗಳು ಸ್ಪಷ್ಟವಾಗಿ ಕಾಣುವಂತೆ).
6. ವಿದ್ಯಾರ್ಥಿಯು ವಿಕಲಚೇತನ/ಅಂಧ ವಿದ್ಯಾರ್ಥಿಗಳಾಗಿದ್ದಲ್ಲಿ, ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪಡೆದ ಪ್ರಮಾಣ ಪತ್ರ.
7. ವಿದ್ಯಾರ್ಥಿಯ ಫೋಟೋ ( Only JPG can be uploaded with max. of 30 kb.)
8. ಗ್ರಾಮ ಪಂಚಾಯತ್/ಸ್ಥಳೀಯ ಸಂಸ್ಥೆಗಳಿಂದ ಪಡೆಯಲಾದ ವಾಸಸ್ಥಳ ದೃಢೀಕರಣ ಪತ್ರ.
ವಿಶೇಷ ಸೂಚನೆ :
ವಿದ್ಯಾರ್ಥಿಯು ಆನ್‍ಲೈನ್ ಅರ್ಜಿಯ ಪ್ರತಿ ಹಾಗೂ ಅಪ್‍ಲೋಡ್ ಮಾಡಲಾದ ದಾಖಲಾತಿಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ , ಸಂಬಂಧಪಟ್ಟ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ದಿನಾಂಕ 17.07.2019 ರೊಳಗೆ ಕಡ್ಡಾಯವಾಗಿ ಸಲ್ಲಿಸಿ, ಸ್ವೀಕೃತಿ ಪಡೆಯತಕ್ಕದ್ದು. ಒಂದು ವೇಳೆ ನಿಗದಿತ ದಿನಾಂಕದೊಳಗೆ ದಾಖಲಾತಿಗಳನ್ನು ಸಲ್ಲಿಸದಿದ್ದಲ್ಲಿ, ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.
ವಿದ್ಯಾರ್ಥಿನಿಲಯಗಳಿಗೆ, ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ
1. ಅರ್ಹರಿರುವ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯು ತಾಲ್ಲೂಕಿನ ಹೆಚ್ಚಿನ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರು ಅಧ್ಯಕ್ಷರಾಗಿರುವ ಸಮಿತಿಯ ಮೂಲಕ ನಡೆಯುತ್ತದೆ.
2. ವಿದ್ಯಾರ್ಥಿನಿಲಯದಲ್ಲಿ ಪ್ರವರ್ಗವಾರು, ಕೋರ್ಸುವಾರು ಲಭ್ಯವಿರುವ ಸೀಟುಗಳ ಆಧಾರದ ಮೇಲೆ ಹಾಗೂ ಅಂಕಗಳ ಆಧಾರದ ಮೇರೆಗೆ ಆಯ್ಕೆ ಮಾಡಿಕೊಳ್ಳಲಾಗುವುದು.
3. ಆಯಾ ಜಿಲ್ಲೆಯ ಸ್ಥಳೀಯ ವಿದ್ಯಾರ್ಥಿಗಳಿಗೆ ಮೊದಲನೆ ಆದ್ಯತೆಯನ್ನು ನೀಡಲಾಗುವುದು.
4. ಒಂದು ವೇಳೆ ವಿದ್ಯಾರ್ಥಿಯ ಅಂಕಗಳು ಸಮನಾಗಿದ್ದರೆ, ವಿದ್ಯಾರ್ಥಿಯ ಸ್ವಂತ ಸ್ಥಳದ ದೂರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
5. ಅರ್ಹರಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ದೊರಕದಿದ್ದಲ್ಲಿ,ಅಂತಹ ವಿದ್ಯಾರ್ಥಿಗಳ ಅರ್ಜಿಗಳನ್ನು ಅನುದಾನದ ಲಭ್ಯತೆಗೊಳಪಟ್ಟು ಅರ್ಹತೆ ಆಧಾರದ ಮೇಲೆ,ವಿದ್ಯಾಸಿರಿ- ಊಟ ಮತ್ತು ವಸತಿ ಸಹಾಯ ಯೋಜನೆಯಡಿ ಪರಿಗಣಿಸಲಾಗುವುದು.

Comments