ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:17 ಮಾರ್ಚ್ 2025
Image not found

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (Nimhans) ಖಾಲಿ ಇರುವ ಕ್ಲಿನಿಕಲ್ ಪೋಸ್ಟ್-ಡಾಕ್ಟರಲ್ ಫೆಲೋ ಹುದ್ದೆಯನ್ನು ಗುತ್ತಿಗೆಯ ಆದಾರದ ಮೇಲೆ  ಮೂರೂ ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.


ಹುದ್ದೆಯ ವಿವರ :
ಹುದ್ದೆಯ ಹೆಸರು: ಕ್ಲಿನಿಕಲ್ ಪೋಸ್ಟ್-ಡಾಕ್ಟರಲ್ ಫೆಲೋ
ಹುದ್ದೆಗಳ ಸಂಖ್ಯೆ: 1
ವೇತನ : ಪ್ರತಿ ತಿಂಗಳು ರೂ. 1,10,000/-


ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಎಂ.ಡಿ ಅಥವಾ ಡಿಎನ್‌ಬಿ ಪೂರೈಸಿರಬೇಕು.


ವಯೋಮಿತಿ :
ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷವಾಗಿರಬೇಕು.


ಆಯ್ಕೆ ಪ್ರಕ್ರಿಯೆ :
ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ಮಾಡುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


ಸಂದರ್ಶನದ ವಿವರಗಳು :
ದಿನಾಂಕ
: 2025 ಮಾರ್ಚ್ 22
ಸಮಯ : ಬೆಳಿಗ್ಗೆ 10:30 ಕ್ಕೆ
ಸ್ಥಳ : ಪರೀಕ್ಷಾ ಸಭಾಂಗಣ, ಎನ್‌ಬಿಆರ್‌ಸಿ ಕಟ್ಟಡ, 4ನೇ ಮಹಡಿ, ನಿಮ್ಹಾನ್ಸ್, ಬೆಂಗಳೂರು – 560029, ಕರ್ನಾಟಕ (Exam Hall, NBRC Building, 4th Floor, NIMHANS, Bengaluru – 560029, Karnataka)
               ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ.  ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಅರ್ಧ ಗಂಟೆ ಮುಂಚಿತವಾಗಿಯೇ ಸಂದರ್ಶನ ಸ್ಥಳದಲ್ಲಿ ಹಾಜರಿರಬೇಕು.

Comments