ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:5 ಎಪ್ರಿಲ್ 2025
Image not found

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಖಾಲಿ ಇರುವ ಡಿಜಿಟಲ್ ಮತ್ತು ಸೋಶಿಯಲ್ ಮೀಡಿಯಾ ಮ್ಯಾನೇಜರ್, ಮೀಡಿಯಾ ಅಸಿಸ್ಟೆಂಟ್ ಮ್ಯಾನೇಜರ್, ಕಂಟೆಂಟ್ ರೈಟರ್ (ಕನ್ನಡ ಮತ್ತು ಇಂಗ್ಲಿಷ್) ಮತ್ತು ಗ್ರಾಫಿಕ್ ಡಿಸೈನರ್ ಮತ್ತು ವೀಡಿಯೋ ಎಡಿಟರ್ ಸೇರಿದಂತೆ ವಿವಿಧ ಹುದ್ದೆಗಳನ್ನು ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.


ಹುದ್ದೆಗಳ ವಿವರ : 05
ಡಿಜಿಟಲ್ ಮತ್ತು ಸೋಶಿಯಲ್ ಮೀಡಿಯಾ ಮ್ಯಾನೇಜರ್: 1 ಹುದ್ದೆ​
ಮೀಡಿಯಾ ಅಸಿಸ್ಟೆಂಟ್ ಮ್ಯಾನೇಜರ್: 1 ಹುದ್ದೆ​
ಕಂಟೆಂಟ್ ರೈಟರ್ (ಕನ್ನಡ ಮತ್ತು ಇಂಗ್ಲಿಷ್): 1 ಹುದ್ದೆ​
ಗ್ರಾಫಿಕ್ ಡಿಸೈನರ್ ಮತ್ತು ವೀಡಿಯೋ ಎಡಿಟರ್: 1 ಹುದ್ದೆ​
ಸ್ಟುಡಿಯೋ ಮ್ಯಾನೇಜರ್ ಮತ್ತು ಫೋಟೋಗ್ರಾಫರ್/ವೀಡಿಯೋಗ್ರಾಫರ್: 1 ಹುದ್ದೆ


ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.


ವಾಕ್-ಇನ್ ಸಂದರ್ಶನದ ವಿವರ:
ದಿನಾಂಕ: 2025 ಏಪ್ರಿಲ್ 11​
ಸಮಯ: ಬೆಳಿಗ್ಗೆ 11:00 ಗಂಟೆ​
ಸ್ಥಳ: ಮುಖ್ಯ ಆಡಳಿತಾಧಿಕಾರಿ ಕಚೇರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಕಚೇರಿ, 1ನೇ ಮಹಡಿ, ಪಶ್ಚಿಮ ವಿಂಗ್, ಆರೋಗ್ಯ ಸೌಧ, ಮಾಗಡಿ ರಸ್ತೆ, 1ನೇ ಕ್ರಾಸ್,ಬೆಂಗಳೂರು-560023

ಸೂಚನೆ: ಅಭ್ಯರ್ಥಿಗಳು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ನಿರ್ಧಿಷ್ಟ ದಿನಾಂಕ ಮತ್ತು ಸಮಯಕ್ಕೆ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು NHM ಕರ್ನಾಟಕ ಅಧಿಕೃತ ವೆಬ್‌ಸೈಟ್ nhm.karnataka.gov.in ಅನ್ನು ಭೇಟಿ ಮಾಡಿ.

Comments