ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:22 ಮಾರ್ಚ್ 2025
Image not found

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ನಲ್ಲಿ ಖಾಲಿ ಇರುವ 5 CISO, ಕ್ಲೈಮೇಟ್ ಚೇಂಜ್ ಸ್ಪೇಸೆಲಿಸ್ಟ್ ಮತ್ತು ಕಂಟೆಂಟ್ ರೈಟರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದು. 


ಹುದ್ದೆಗಳ ವಿವರ : 
CISO : 01
Climate Change Specialist-Mitigation : 01
Climate Change Specialist-Adaptation : 01
Content Writer : 01
Graphic Designer : 01


ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಪದವಿ, BCA, B.Sc, B.Tech/B.E, ಡಿಪ್ಲೊಮಾ, B.Des, M.Sc, M.E/M.Tech, MCA, M.Des ಮುಂತಾದ ಅರ್ಹತೆಗಳನ್ನು ಹೊಂದಿರಬೇಕು.


ವಯೋಮಿತಿ:
ಕನಿಷ್ಠ ವಯಸ್ಸು: 21 ವರ್ಷ​
ಗರಿಷ್ಠ ವಯಸ್ಸು: 55 ವರ್ಷ​
ವಯೋಮಿತಿ ಸಡಿಲಿಕೆ: ನಿಯಮಾನುಸಾರ ಅನ್ವಯಿಸುತ್ತದೆ​


ಅರ್ಜಿ ಶುಲ್ಕ:
ಎಸ್‌ಸಿ/ಎಸ್‌ಟಿ/PWBD ಅಭ್ಯರ್ಥಿಗಳಿಗೆ: ರೂ. 150/-​
ಇತರ ಅಭ್ಯರ್ಥಿಗಳಿಗೆ: ರೂ. 850/-​


ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಾಬಾರ್ಡ್ ಅಧಿಕೃತ ವೆಬ್‌ಸೈಟ್ (nabard.org) ಮೂಲಕ 22 ಮಾರ್ಚ್ 2025 ರಿಂದ 6 ಏಪ್ರಿಲ್ 2025 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


ಮುಖ್ಯ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 22 ಮಾರ್ಚ್ 2025​
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 6 ಏಪ್ರಿಲ್ 2025​


ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಗಾಗಿ, ದಯವಿಟ್ಟು ನಾಬಾರ್ಡ್ ಅಧಿಕೃತ ವೆಬ್‌ಸೈಟ್ (nabard.org) ಗೆ ಭೇಟಿ ನೀಡಿ.

Comments