Loading..!

ಕರ್ನಾಟಕ ರಾಜ್ಯದಲ್ಲಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇದೀಗ ಪ್ರಕಟ
Published by: Basavaraj Halli | Date:22 ಡಿಸೆಂಬರ್ 2021
Image not found
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕುಂದಗೋಳ ಶಾಸಕರು ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೇಳಿದೆ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಮಾನ್ಯ ಮುಖ್ಯಮತ್ರಿಗಳು ಉತ್ತರಿಸಿದ್ದು, ಪ್ರಸ್ತುತ ರಾಜ್ಯದಲ್ಲಿ 45 ಹುದ್ದೆಗಳು ಖಾಲಿ ಇರುತ್ತವೆ, ಇನ್ನೂ ನೇಮಕಾತಿ ವಿಳಂಬದ ಕುರಿತು ಉತ್ತರದಲ್ಲಿ ಅಂಗವಿಕಲ ಮೀಸಲಾತಿ ಹೆಚ್ಚಳ ಹಾಗೂ ತೃತೀಯ ಲಿಂಗದ ಅಭ್ಯರ್ಥಿಗಳಿಗೂ ಮೀಸಲಾತಿ ಕಲ್ಪಿಸುವುದರಿಂದಾಗಿ ನೇಮಕಾತಿ ವಿಳಂಬಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. 

ಇನ್ನು 2017-18 ನೇ ಸಾಲಿನಲ್ಲಿ 105 ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ನೇಮಕಾತಿಯ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತು ಕೆಪಿಎಸ್ ಸಿ(KPSC)ಯು ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಉತ್ತರದಲ್ಲಿ ತಿಳಿಸಿದ್ದಾರೆ. ಜೊತೆಗೆ ಹಾಲಿ ನಿಯಮಗಳನ್ನು ಪರಿಷ್ಕರಿಸಿ ಶೀಘ್ರದಲ್ಲಿಯೇ ನೂತನವಾಗಿ ಕೆಎಎಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಇದೇ ವೇಳೆ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಈ ಕುರಿತು ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಿರುವ ಪ್ರಕಟನೆಯಿಂದ ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

* ಬರುವ ನೂತನ ವರ್ಷದ ಫೆಬ್ರುವರಿ ಮಾಹೆಯಲ್ಲಿ ನೂತನವಾಗಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆಯಿದ್ದು, ಆಕಾಂಕ್ಷಿಗಳು ಈಗಿನಿಂದಲೇ ಉತ್ತಮ ತಯಾರಿ ಆರಂಭಿಸಿ..ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿ..

Comments