ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿನ (KSRTC) ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗಾಗಿ 17-03-2018 ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು, ದಿನಾಂಕ: 02-02-2020 ರಂದು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಕನಿಷ್ಟ 30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳಿಗೆ ದಾಖಲಾತಿ/ ದೇಹದಾರ್ಡ್ಯತೆ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ದಾಖಲಾತಿ/ ದೇಹದಾರ್ಡ್ಯತೆ ಪರಿಶೀಲನೆಯನ್ನು ದಿನಾಂಕ 26-12-2023 ರಿಂದ 28-12-2023 ರ ವರೆಗೆ ಬೆಳಿಗ್ಗೆ 9.30 ರಿಂದ ನಡೆಸಲಾಗಿತ್ತದೆ. ಈ ಕುರಿತು ಅರ್ಹ ಅಭ್ಯರ್ಥಿಗಳು 18-12-2023 ಮದ್ಯಾಹ್ನ 1.00 ನಂತರ ಕರೆ ಪತ್ರವನ್ನೂ ಡೌನ್-ಲೋಡ್ ಮಾಡಿಕೊಳ್ಳಲು ಇದೀಗ ಅವಕಾಶ ಕಲ್ಪಿಸಲಾಗಿದೆ.
ದಾಖಲಾತಿ/ ದೇಹದಾರ್ಡ್ಯತೆ ಪರಿಶೀಲನೆ ನಡೆಯುವ ಸ್ಥಳ :
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯ ಸಭಾಂಗಣ, ಶಾಂತಿನಗರ, ಬೆಂಗಳೂರು
- ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಭ್ಯರ್ಥಿಗಳು ಕರೆ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
Comments