Loading..!

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿನ 9,000 ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Published by: Yallamma G | Date:15 ಡಿಸೆಂಬರ್ 2023
Image not found

ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿನ ಹುದ್ದೆಗಳ ನಿರೀಕ್ಷೆಯಲ್ಲಿದ್ದ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಇದೀಗ ಸಿಹಿಸುದ್ದಿ ಬಂದಿದ್ದು, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಖಾಲಿ ಇರುವ 9,000 ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಕರ್ನಾಟಕ ಸರಕಾರ ನಿರ್ಧರಿಸಲಾಗಿದೆ. 2016 ರಲ್ಲಿ ಸಾರಿಗೆ ಚಾಲಕ ಮತ್ತು ನಿರ್ವಾಹಕರ ನೇಮಕಾತಿ ಮಾಡಿಕೊಳ್ಳಲಾಗಿತ್ತು ನಂತರ 7 ವರ್ಷಗಳಿಂದ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ, ಈ ಕಳೆದ 7 ವರ್ಷಳಲ್ಲಿ 13,888 ಸಿಬ್ಬಂದಿ ನಿವೃತ್ತಿಯನ್ನು ಹೊಂದಿದ್ದಾರೆ. ಅದರಿಂದಾಗಿ ಈಗ 9000 ಜನರನ್ನು ಹೊಸ ನೇಮಕ ಮಾಡಿಕೊಳ್ಳುವ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರು ತಿಳಿಸಿದ್ದಾರೆ.
- ಕೆಎಸ್‌ಆರ್‌ಟಿಸಿ : 2000 ಚಾಲಕ ಕಂ ನಿರ್ವಾಹಕ, 300 ತಾಂತ್ರಿಕ ಸಹಾಯಕ ಹುದ್ದೆಗಳು 
- ಬಿಎಂಟಿಸಿ : 2,500 ನಿವಾರ್ಹಕರ ಹುದ್ದೆಗಳು 
- ಎನ್‌ಇಕೆಆರ್‌ಟಿಸಿ : 2000 ಚಾಲಕ- ಕಂ- ನಿರ್ವಾಹಕ, 45 ಅಧಿಕಾರಿಗಳು, 97 ಮೇಲ್ವಿಚಾರಕರು, 28 ಸಹಾಯಕ ಸಂಚಾರ ವ್ಯವಸ್ಥಾಪಕರು, 80 ಕುಶಲಕರ್ಮಿ, 500 ತಾಂತ್ರಿಕ ಸಹಾಯಕರ ನೇರ ನೇಮಕ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಕೆಕೆಆರ್‌ಟಿಸಿಗೆ 925 ಚಾಲಕ, 694 ಚಾಲಕ ಕಂ ನಿರ್ವಾಹಕ ಸಹಿತ ವಿವಿಧ ಹುದ್ದೆಗಳನ್ನು ಭರ್ತಿಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಈ ಹುದ್ದೆಗಳ ಆಕಾಂಕ್ಷಿಗಳು ಕೂಡಲೇ ಉತ್ತಮ ತಯಾರಿ ಆರಂಭಿಸಿ ಯಶಸ್ವಿಯಾಗಿ.
* ಈ ಕುರಿತು ಮಾನ್ಯ  ಸಾರಿಗೆ ಸಚಿವರು ಅಧಿಕೃತವಾಗಿ ತಿಳಿಸಿದ್ದು, ಇನ್ನೇನು ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.

Comments