Loading..!

ಕರ್ನಾಟಕ ಪೊಲೀಸ್ ಇಲಾಖೆಯಿಂದ ಶೀಘ್ರದಲ್ಲೇ 1500 ಹುದ್ದೆಗಳ ಅಧಿಸೂಚನೆ.! ಈ ಕುರಿತ ಸಂಕ್ಷಿಪ್ತ ಮಾಹಿತಿ ನಿಮಗಾಗಿ
Published by: Yallamma G | Date:12 ಜೂನ್ 2024
Image not found

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಭಾಗವಾಗಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ಹಾಗೂ ವಿಶೇಷ ಮೀಸಲು ಪೊಲೀಸ್‌ ಪಡೆಯಲ್ಲಿ (ಸ್ಪೆಷಲ್ RPC) 1500 ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಈಗಾಗಲೇ ಅನುಮತಿ ನೀಡಿ ಆದೇಶ ಹೊರಡಿಸಿದೆ. ಅದರಂತೆ. 1500 ಹುದ್ದೆಗಳಲ್ಲಿ 886 ಹುದ್ದೆಗಳು ಕಲ್ಯಾಣ- ಕರ್ನಾಟಕೇತರ ಹುದ್ದೆಗಳಾಗಿದ್ದು, ಕಲ್ಯಾಣ ಕರ್ನಾಟಕ ವೃಂದಕ್ಕೆ 614 ಹುದ್ದೆಗಳನ್ನು ಮೀಸಲಿಡಲಾಗಿದೆ.  


ಒಟ್ಟು 1,500 ಹುದ್ದೆಗಳಲ್ಲಿ 30 ಹುದ್ದೆಗಳನ್ನು ಪ್ರತಿಭಾವಂತ ಕ್ರೀಡಾ ಪಟುಗಳಿಗಾಗಿ ಮೀಸಲಿಡಲಾಗಿದೆ. ಇದರಲ್ಲಿ 12 ಸ್ಥಾನ ಕಲ್ಯಾಣ- ಕರ್ನಾಟಕದ ಅಭ್ಯರ್ಥಿಗಳಿಗಾಗಿ ನಿಗದಿ ಮಾಡಲಾಗಿದೆ. 


- ಮಂಗಳೂರು, ಶಿವಮೊಗ್ಗ, ಶಿಗ್ಗಾವಿ, ಹಾಸನ, ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರಗಿ, ತುಮಕೂರು, ಮುನಿರಾಬಾದ್ ಮೊದಲಾದ ಕಡೆಗಳ ಮೀಸಲು ಪೊಲೀಸ್ ಘಟಕಗಳಿಗೆ ನೇಮಕಾತಿ ನಡೆಯಲಿದೆ. 


* ಬಹುದಿನಗಳಿಂದ ಪೊಲೀಸ್ ಇಲಾಖೆ ನೇಮಕಾತಿಗಾಗಿ ತಯಾರಿನಡೆಸಿರುವ ಅಭ್ಯರ್ಥಿಗಳಿಗೆ ಇದೀಗ ಸುವರ್ಣಾವಕಾಶ ಒದಗಿ ಬಂದಿದ್ದು, ತಮ್ಮ ತಯಾರಿಯನ್ನು ಮತ್ತಷ್ಟು ಚುರುಕುಗೊಳಿಸಿ ಯಶಸ್ವಿಯಾಗಿ...


* ಈ ನೇಮಕಾತಿಯ ಕುರಿತ ಪ್ರತಿ ಹಂತದ ಮಾಹಿತಿಯನ್ನು ನಿಮ್ಮ KPSCVaani ಜಾಲತಾಣದಲ್ಲಿ ಒದಗಿಸಲಾಗುವುದು ನಿರೀಕ್ಷಿಸಿ....

Comments