Loading..!

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(KRIES)ದ ವಸತಿ ಶಾಲೆಗಳಲ್ಲಿ 3517 ಹುದ್ದೆಗಳ ಬೃಹತ್ ನೇಮಕಾತಿ ಕರಡು ಅಧಿಸೂಚನೆ ಪ್ರಕಟ
Published by: Yallamma G | Date:30 ನವೆಂಬರ್ 2024
Image not found

ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ 27 ನವೆಂಬರ್ 2024 ರಂದು ಪ್ರಕಟಿಸಿದ ರಾಜ್ಯಪತ್ರದಲ್ಲಿಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಧೀನ ಶಾಲೆಗಳಾದ ಮೊರಾರ್ಜಿ ದೇಸಾಯಿ/ವಾಜಪೇಯಿ/ ಕ್ರೈಸ್ತ ಬಾಲಕಿಯರ ಶಾಲೆ ಸೇರಿದಂತೆ ವಿವಿಧ ಶಾಲೆಗಳಲ್ಲಿನ ಖಾಲಿ ಇರುವ 3517 ಕನ್ನಡ ಭಾಷಾ ಶಿಕ್ಷಕರು, ವಾರ್ಡನ್, ನರ್ಸಿಂಗ್ ಅಧಿಕಾರಿಗಳು, ಗಣಿತ ಶಿಕ್ಶಕರು, ಪ್ರಾಂಶುಪಾಲರು  ಮತ್ತು ಉಪಪ್ರಾಂಶುಪಾಲರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕರಡು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರಿಂದ ಹಾಗೂ ಸಂಬಂಧಪಟ್ಟವರಿಂದ ಸಲಹೆ ಸೂಚನೆ ಹಾಗೂ ಆಕ್ಷೇಪಣೆಗಳನ್ನೂ ಆಹ್ವಾನಿಸಲಾಗಿದೆ. ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಶೇ.75 ಹುದ್ದೆಗಳನ್ನು ಬಡ್ತಿ ಮೂಲಕವೇ ಭರ್ತಿ ಮಾಡಿಕೊಳ್ಳಲಾಗುತ್ತದೆ. 


ಹುದ್ದೆಗಳ ವಿವರ : 
ವಾಜಪೇಯಿ ಶಾಲೆಗಳ ಪ್ರಾಂಶುಪಾಲರು : 16
ವಾಜಪೇಯಿ ಶಾಲೆಗಳ ಉಪಪ್ರಾಂಶುಪಾಲರು : 15
ಕ್ರೈಸ್ ಬಾಲಕಿಯರ ಶಾಲೆಗಳ ಪ್ರಾಂಶುಪಾಲರು : 209
ಹಿಂದಿ ಶಿಕ್ಷಕರು : 811
ದೈಹಿಕ ಶಿಕ್ಷಣ ಶಿಕ್ಷಕರು : 811
ವಾರ್ಡನ್ : 738
ನರ್ಸಿಂಗ್ ಅಧಿಕಾರಿಗಳು : 457 (278 ತಾತ್ಕಾಲಿಕ)

ಮುರಾರ್ಜಿ ವಸತಿ ಶಾಲೆ ಸ್ಥಾನಗಳು

ಕನ್ನಡ ಭಾಷಾ ಶಿಕ್ಷಕರು : 26
ಇಂಗ್ಲಿಷ್ : 26
ಭೌತಶಾಸ್ತ್ರ : 26
ರಸಾಯನಶಾಸ್ತ್ರ : 26
ಗಣಿತ : 26
ಜೀವವಿಜ್ಞಾನ : 26
ಕಂಪ್ಯೂಟರ್ ಸೈನ್ಸ್ : 26


             ಒಟ್ಟಾರೆ 735 ನರ್ಸಿಂಗ್ ಹುದ್ದೆಗಳನ್ನು ನೇಮಕಾತಿಗೆ ಪರಿಗಣಿಸಲಾಗುತ್ತಿದೆಯಾದರೂ ಇದರಲ್ಲಿ 457 ಹುದ್ದೆಗಳು ಮಾತ್ರ ಕಾಯಂ ಹುದ್ದೆಗಳಾಗಿವೆ. ಉಳಿದ 278 ಹುದ್ದೆಗಳನ್ನು ತಾತ್ಕಾಲಿಕ ನೆಲೆಯಲ್ಲಿ ಗುರುತಿಸಲಾಗಿದೆ. ಬಿಎಸ್‌ಸಿ ನರ್ಸಿಂಗ್‌, ಜಿಎನ್‌ಎಂ ಪೂರೈಸಿದವರು ಹಾಗೂ ನರ್ಸಿಂಗ್ ಮಂಡಳಿಯಲ್ಲಿ ನೋಂದಾಯಿತರಾದವರನ್ನು ನೇಮಕಾತಿಗೆ ಪರಿಗಣಿಸಬಹುದು ಎಂದು ತಿಳಿಸಲಾಗಿದೆ. 


         ಶೀಘ್ರದಲ್ಲೇ ಈ ಎಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯುವ ಸಾಧ್ಯತೆ ದಟ್ಟವಾಗಿದ್ದು, ಈ ಹುದ್ದೆಗಳಿಗೆ ಅರ್ಹತೆ ಹೊಂದಿದ ಎಲ್ಲ ಅಭ್ಯರ್ಥಿಗಳು ಈಗಿನಿಂದಲೇ ತಮ್ಮ ತಯಾರಿಯನ್ನು ಚುರುಕುಗೊಳಿಸಿ. ಹಾಗೂ ಈ ಕುರಿತ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ರಾಜ್ಯಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Comments