ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ಇವರು ಖಾಲಿಯಿರುವ ಸಹಾಯಕ ಇಂಜಿನಿಯರ್ (ವಿದ್ಯುತ್), ಸಹಾಯಕ ಇಂಜಿನಿಯರ್ (ಸಿವಿಲ್), ಕಿರಿಯ ಎಂಜಿನಿಯರ್ (ವಿದ್ಯುತ್), ಕಿರಿಯ ಎಂಜಿನಿಯರ್ (ಸಿವಿಲ್) ಹಾಗೂ ಕಿರಿಯ ಸಹಾಯಕ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಪಟ್ಟಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಈಗಾಗಲೇ ದಿನಾಂಕಗಳನ್ನು ಅಂತಿಮಗೊಳಿಸಿ ಇಲಾಖೆಯ ಸುತ್ತೋಲೆ ಹೊರಡಿಸಿತ್ತು, ಸದರಿ ನೇಮಕಾತಿಯ ಲಿಖಿತ ಪರೀಕ್ಷೆಗಾಗಿ ಪ್ರವೇಶ ಪತ್ರಗಳನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿರುತ್ತದೆ.
* ಕಿರಿಯ ಇಂಜಿನಿಯರ್ (ಸಿವಿಲ್ ಹಾಗೂ ವಿದ್ಯುತ್) ವಿಭಾಗದ ಹುದ್ದೆಗಳ ನೇಮಕಾತಿಗಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನಾಂಕ 23 ಜುಲೈ 2022ರ ಶನಿವಾರ ಪರೀಕ್ಷೆ ನಡೆಯಲಿದೆ ಹಾಗೂ ಸಹಾಯಕ ಇಂಜಿನಿಯರ್ (ಸಿವಿಲ್ ಹಾಗೂ ವಿದ್ಯುತ್) ವಿಭಾಗದ ಹುದ್ದೆಗಳ ನೇಮಕಾತಿಗಾಗಿ ಬೆಂಗಳೂರಿನಲ್ಲಿ ದಿನಾಂಕ 24 ಜುಲೈ 2022ರಂದು ಪರೀಕ್ಷೆಗಳು ನಡೆಯಲಿವೆ.
* ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ದಿನಾಂಕ 07 ಆಗಸ್ಟ್ 2022ರ ಭಾನುವಾರದಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯ ಡ್ರೆಸ್ ಕೋಡನ್ನು (ವಸ್ತ್ರ ಸಂಹಿತೆ) ನಿಗದಿಪಡಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಸೂಚನೆಗಳನ್ನು ಓದಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿರುತ್ತದೆ.
Comments