ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 14 ಮೇ 2020 ರಂದು ಅಧಿಸೂಚಿಸಿದ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ-1122 ಕಿರಿಯ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 09-01-2023ರಂದು ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿತ್ತು, ಹಾಗೂ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿ ದಿನಾಂಕ: 14-03-2023 ರಂದು ಮತ್ತು ನಂತರದ ಹೆಚ್ಚುವರಿ ಪಟ್ಟಿಯನ್ನು ದಿನಾಂಕ: 05-05-2023 ಮತ್ತು 11-06-2024 ರಂದು ಪ್ರಕಟಿಸಲಾಗಿತ್ತು.
ಹೊಸ ಹೆಚ್ಚುವರಿ ಆಯ್ಕೆಪಟ್ಟಿ 2025 :
ಪ್ರಸ್ತುತ, 11 ಇಲಾಖೆಗಳಿಂದ ಸ್ವೀಕೃತವಾದ ಪ್ರಸ್ತಾವನೆಯ ಕಾಲಾನುಕ್ರಮದನುಸಾರ 134 ಹುದ್ದೆಗಳ ಎರಡನೇ ಹೆಚ್ಚುವರಿ ಆಯ್ಕೆಪಟ್ಟಿಯನ್ನು KPSC ಇಲಾಖೆಯು ಪ್ರಕಟಿಸಿದೆ. ಈ ಆಯ್ಕೆಪಟ್ಟಿಯು ದಿನಾಂಕ: 25-03-2025 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಅಧಿಸೂಚನೆ ವಿವರಗಳು :
- ಅಧಿಸೂಚನೆ ಸಂಖ್ಯೆ: (3)800/2019-20/22, ದಿನಾಂಕ: 29-02-2020
- ಸೇರ್ಪಡೆ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ/ಇ(3)4(A)/2020-21, ದಿನಾಂಕ: 14-05-2020
ಹುದ್ದೆಗಳ ವಿವರ :
- ಹುದ್ದೆಗಳ ಒಟ್ಟು ಸಂಖ್ಯೆ: 134 (2ನೇ ಹೆಚ್ಚುವರಿ ಆಯ್ಕೆಪಟ್ಟಿ)
- ಹುದ್ದೆಯ ಹೆಸರು: ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರು
- ಆಯ್ಕೆ ಪ್ರಕ್ರಿಯೆ: ಮೌಲ್ಯಮಾಪನದ ಕಟ್‌ಆಫ್ ಅಂಕಗಳ ಆಧಾರದ ಮೇಲೆ
ಅಧಿಕೃತ ವೆಬ್‌ಸೈಟ್ :
ಅಭ್ಯರ್ಥಿಗಳು ಆಯ್ಕೆಪಟ್ಟಿಯ ಸಂಪೂರ್ಣ ಮಾಹಿತಿಯನ್ನು ಮತ್ತು ಕಟ್‌ಆಫ್ ಅಂಕಗಳ ಪಟ್ಟಿಯನ್ನು https://kpsc.kar.nic.in/ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.
ಈ ಹೆಚ್ಚುವರಿ ಆಯ್ಕೆಪಟ್ಟಿಯು ಹಲವಾರು ಅಭ್ಯರ್ಥಿಗಳಿಗೆ ಹೊಸ ಅವಕಾಶವನ್ನು ನೀಡಲಿದೆ. ಆಯ್ಕೆಗೊಂಡ ಅಭ್ಯರ್ಥಿಗಳು ತಮ್ಮ ಕಡೆಯ ಹಂತದ ದಾಖಲೆ ಪರಿಶೀಲನೆಗೆ ಸಿದ್ಧವಾಗಬೇಕು.
ಹೆಚ್ಚುವರಿ ಮಾಹಿತಿಗಾಗಿ KPSC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ!
Comments