ಕರ್ನಾಟಕ ಲೋಕ ಸೇವಾ ಆಯೋಗದಿಂದ 29-02-2020 ಹಾಗೂ ಸೇರ್ಪಡೆ ಅಧಿಸೂಚನೆ ಸಂಖ್ಯೆ:ಪಿಎಸ್‌ಸಿ/ಇ(3)4(A)/2020-21 ದಿನಾಂಕ:14-05-2020ರನ್ವಯ ಅಧಿಸೂಚಿಸಿರುವ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಹೈದ್ರಾಬಾದ್-ಕರ್ನಾಟಕ ವೃಂದದ 201 ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ(SDA) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ:09-01-2023ರಂದು ಹಾಗೂ ಹೆಚ್ಚುವರಿ ಪಟ್ಟಿಯನ್ನು ದಿನಾಂಕ:05-05-2023ರಂದು ಹಾಗೂ 1ನೇ ಹೆಚ್ಚುವರಿ ಆಯ್ಕೆಪಟ್ಟಿಯನ್ನು ದಿ:15-06-2024ರಂದು ಪ್ರಕಟಿಸಲಾಗಿರುತ್ತದೆ. ಪ್ರಸ್ತುತ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಗಾಗಿ ಇಲಾಖೆಗಳಿಂದ ಸ್ವೀಕೃತವಾದ ಪ್ರಸ್ತಾವನೆಯ ಕಾಲಾನುಕ್ರಮದನುಸಾರ 14 ಹುದ್ದೆಗಳ 2 ಹೆಚ್ಚುವರಿ ಆಯ್ಕೆಪಟ್ಟಿಯನ್ನು ಹಾಗೂ ಕಟ್‌ಆಫ್ ಅಂಕಗಳ ಪಟ್ಟಿಯನ್ನು ಸಿದ್ಧಪಡಿಸಿ ಇದೀಗ ಆಯೋಗದ ವೆಬ್ ಸೈಟ್ ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.
Comments