KPSCಯಿಂದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ವೆಲ್ಡರ್ ಹುದ್ದೆಗಳ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿ ಇದೀಗ ಪ್ರಕಟ
Published by: Bhagya R K | Date:4 ಎಪ್ರಿಲ್ 2025
Image not found

ಕರ್ನಾಟಕ ಲೋಕಸೇವಾ ಆಯೋಗದಿಂದ (KPSC) ದಿನಾಂಕ 25/09/2019 ರಂದು ಅಧಿಸೂಚಿಸಲಾದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿಗಳ ವೆಲ್ಡರ್ 11+5 (HK) ಹುದ್ದೆಗಳ ನೇಮಕಾತಿಗಾಗಿ ಅಧುಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 


   ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕರ್ನಾಟಕ ನಾಗರಿಕ ಸೇವೆಗಳ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ (ಸಾಮಾನ್ಯ) ನಿಯಮಗಳು  2006 ಹಾಗೂ ತಿದ್ದುಪಡಿ ನಿಯಮಗಳು) ಅನುಸಾರ ನಡೆಯಿತು. ತಿದ್ದುಪಡಿ ನಿಯಮಗಳನ್ವಯ 07/05/2024 ರಂದು ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು. 


 ಈ ಸಂಬಂಧ ಸ್ವೀಕೃತ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಭ್ಯರ್ಥಿಗಳ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಂಬಂಧಿತ ಪ್ರಕರಣಗಳಲ್ಲಿ ದಿನಾಂಕ: 17-12-2024ರಂದು ನೀಡಿದ ನಿರ್ದೇಶನದಂತೆ ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.


ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಗಳು ಮತ್ತು ತಿದ್ದುಪಡಿ ಅಧಿಸೂಚನೆಗಳ ವಿವರಗಳು ಈ ಕೆಳಗಿನಂತಿವೆ:
- ಅಧಿಸೂಚನೆ ಸಂಖ್ಯೆ: ಆರ್(2)3567/17-18/ಪಿಎಸ್‌ಸಿ, ದಿನಾಂಕ: 19-02-2018
- ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಆರ್(2)1762/2019-20/ಪಿಎಸ್‌ಸಿ, ದಿನಾಂಕ: 25-09-2019


ಹುದ್ದೆ: ಕಿರಿಯ ತರಬೇತಿ ಅಧಿಕಾರಿ (ವೆಲ್ಡರ್)
ನೇಮಕಾತಿ ಪ್ರಾಧಿಕಾರ: ಆಯುಕ್ತರು
ಇಲಾಖೆ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ


ಆಯ್ಕೆ ಪಟ್ಟಿಯ ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. 

Comments

*