Loading..!

KAS ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ | ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ..!
Published by: Yallamma G | Date:22 ಜೂನ್ 2024
Image not found

2017-18 ನೇ ಸಾಲಿನ 106 KAS ಹುದ್ದೆಗಳ ನೇಮಕಾತಿಗೆ (Prelims) ಗೆ ಅರ್ಜಿ ಸಲ್ಲಿಸಿದ್ದ 1,65,250 ಅಭ್ಯರ್ಥಿಗಳಿಗೆ ಮಾತ್ರ (ಈಗ ಅವರ ವಯಸ್ಸು ಮೀರಿದ್ದರೂ ಕೂಡಾ) ವಯಸ್ಸಿನ ನಿರ್ಬಂಧವಿಲ್ಲದೆ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಶೀಘ್ರದಲ್ಲಿಯೇ KPSC ಯು ಈ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಕನಿಷ್ಠ 15 ದಿನವಾದರೂ ಹೆಚ್ಚುವರಿ ಕಾಲಾವಕಾಶ ನೀಡಲಿದೆ. ಸಂಬಂಧಿಸಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ Documents ತಯಾರಿ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ 384 KAS ಗೆ 1,95,000 ದಷ್ಟು ಅರ್ಜಿ ಸಲ್ಲಿಕೆಯಾಗಿವೆ, ಈಗ ಇನ್ನಷ್ಟು ಹೆಚ್ಚು'ವರಿ' ಅರ್ಜಿಗಳು ಸಲ್ಲಿಕೆಯಾಗಲಿವೆ.

Comments