Loading..!

ಕರ್ನಾಟಕ ಲೋಕಸೇವಾ ಆಯೋಗದ (KPSC) ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಪೂರ್ವಭಾವಿ ಪರೀಕ್ಷಾ ವೇಳಾಪಟ್ಟಿ ಪ್ರಕಟ
Published by: Yallamma G | Date:12 ಆಗಸ್ಟ್ 2024
Image not found

ಕರ್ನಾಟಕ ಲೋಕಸೇವಾ ಆಯೋಗವು 2024-25 ನೇ ಸಾಲಿನ ಗೆಜೆಟೆಡ್ ಪ್ರೊಬೇಷನ‌ರ್ (KAS) ಗ್ರೂಪ್ - 'ಎ' ಮತ್ತು ಗ್ರೂಪ್- 'ಬಿ' ವೃಂದದ 384 ಹುದ್ದೆಗಳ ನೇಮಕಾತಿಗಾಗಿ 26/02/2024 ರಂದು ಅಧಿಸೂಚನೆಯನ್ನು ಹೊರಡಿಸಿಲಾಗಿತ್ತು, ಸದರಿ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿಯ ಮೊದಲನೇ ಹಂತವಾಗಿ ಪೂರ್ವಭಾವಿ (Preliminary) ಪರೀಕ್ಷೆಯನ್ನು 25/08/2024 ರಂದು ನಡೆಸಲು ನಿರ್ಧರಿಸಲಾಗಿತ್ತು, ಅದೇ ದಿನ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ (IBPS) ಗುಮಾಸ್ತ ಹುದ್ದೆಗಳ ಪರೀಕ್ಷೆ ಇರುವುದರಿಂದ ಹಾಗೂ ಹಲವಾರು ಅಭ್ಯರ್ಥಿಗಳು ಪರೀಕ್ಷಾ ದಿನಾಂಕವನ್ನು ಮುಂದೂಡುವಂತೆ ಮನವಿ ಸಲ್ಲಿಸಿರುವುದರಿಂದಾಗಿ ಪೂರ್ವಭಾವಿ (Preliminary) ಪರೀಕ್ಷೆಯನ್ನು ಮುಂದೂಡಲಾಗಿದ್ದು, ದಿನಾಂಕ 27 ಆಗಸ್ಟ್ 2024 ರ ಮಂಗಳವಾರ ಪೂರ್ವಭಾವಿ (Preliminary) ಪರೀಕ್ಷೆಯನ್ನು ಪರೀಕ್ಷೆ-1 ಬೆಳಿಗ್ಗೆ 10:00 ರಿಂದ 12:00 ಗಂಟೆಯರೆಗೆ ಮತ್ತು ಪರೀಕ್ಷೆ-2 ಮಧ್ಯಾಹ್ನ 2:00 ರಿಂದ 04:00 ಗಂಟೆಯವರಿಗೆ ನಿಗದಿಪಡಿಸಲಾಗಿದೆ. 
* ದಿನಾಂಕದಲ್ಲಿ ಯಾವುದೇ ಬದಲಾವಣೆಗಳಿರುವದಿಲ್ಲ ಎಂದು KPSC ಯು ಇದೀಗ ಸ್ಪಷ್ಟ ಪಡಿಸಿದ್ದು, ದಿನಾಂಕ 15 ಆಗಸ್ಟ್ 2024 ರ ನಂತರ ಪ್ರವೇಶ ಪತ್ರಗಳನ್ನು ಇಲಾಖಾ ಜಾಲತಾಣದಲ್ಲಿ ಡೌನ್ಲೋಡ್ ಮಾಡಿಕೊಳ್ಳಲ್ಲು ಅವಕಾಶ ನೀಡಲಾಗುವುದೆಂದು ಇದೀಗ ತಿಳಿಸಿದೆ .


* ಈ ಕುರಿತ ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿದ KPSC ಯಾ ಅಧಿಕೃತ ಪ್ರಕಟಣೆಯನ್ನು ಗಮನಿಸಬಹುದು.

Comments