ಕರ್ನಾಟಕ ಲೋಕಸೇವಾ ಆಯೋಗದಿಂದ 30/09/2022 ರಂದು ಅಧಿಸೂಚಿಸಲಾದ ಕಾರ್ಮಿಕ ಇಲಾಖೆಯಲ್ಲಿನ 6 ಕಾರ್ಮಿಕ ನಿರೀಕ್ಷಕರು, 14/10/2022 ರಂದು ಅಧಿಸೂಚಿಸಲಾದ ಆರ್ಥಿಕ ಮತ್ತು ಸಂಖ್ಯಿಕ ನಿರ್ದೇಶನಾಲಯದಲ್ಲಿನ 17 ಸಂಖ್ಯಿಕ ನಿರೀಕ್ಷಕರು ಮತ್ತು 26/07/2022 ರಂದು ಅಧಿಸೂಚಿಸಲಾದ ಆರ್ಥಿಕ ಮತ್ತು ಸಂಖ್ಯಿಕ ನಿರ್ದೇಶನಾಲಯದಲ್ಲಿನ 5 ಸಂಖ್ಯಿಕ ಅಧಿಕಾರಿಗಳು ಹುದ್ದೆಗಳ ನೇಮಕಾತಿಗೆ ಸಂಭಂದಿಸಿದಂತೆ ಮೂಲ ದಾಖಲಾತಿ ಪರಿಶೀಲನೆ (Document Verification) ಗೆ ಆಯ್ಕೆಯಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯು ಇದೀಗ ಪ್ರಕಟಗೊಂಡಿದೆ. ಮೂಲ ದಾಖಲಾತಿ ಪರಿಶೀಲನೆಯು ದಿನಾಂಕ 19/06/2023 ರಂದು ನಡೆಯಲಿದೆ.
ದಾಖಲಾತಿ ಪರಿಶೀಲನೆ ನಡೆಯುವ ಸ್ಥಳ :
ಕರ್ನಾಟಕ ಲೋಕಸೇವಾ ಆಯೋಗ,
ಉದ್ಯೋಗ ಸೌಧ, ಬೆಂಗಳೂರು-560001
* ಈ ಕುರಿತು ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
Comments