Loading..!

KPSCಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ & BBMPಲ್ಲಿನ ವಿವಿಧ ಹುದ್ದೆಗಳ ಪರೀಕ್ಷಾ ಪ್ರವೇಶ ಪತ್ರಗಳು ಇದೀಗ ಪ್ರಕಟ | ಈ ಕುರಿತು ಮಾಹಿತಿ ನಿಮಗಾಗಿ
Published by: Yallamma G | Date:22 ಫೆಬ್ರುವರಿ 2025
Image not found

               ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 13-03-2024 ರಂದು ಅಧಿಸೂಚಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೈ.ಕ. ವೃಂದದಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು/ತಾಲ್ಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯಲ್ಲಿನ ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ-1) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 


                   ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು/ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆಗಳಿಗೆ ಪತ್ರಿಕೆ-2 ನಿರ್ದಿಷ್ಟ ಪತ್ರಿಕೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ:02-03-2025ರಂದು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ-1) ಹುದ್ದೆಗಳಿಗೆ ಪತ್ರಿಕೆ-2 ನಿರ್ದಿಷ್ಟ ಪತ್ರಿಕೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ:04-03-2025ರಂದು ನಡೆಸಲಾಗುತ್ತಿದ್ದು, ಇದೀಗ ಕರ್ನಾಟಕ ಲೋಕ ಸೇವಾ ಆಯೋಗವು ಸದರಿ ಪರೀಕ್ಷೆಗಳ "ಪ್ರವೇಶ ಪತ್ರಗಳನ್ನು" ದಿನಾಂಕ 21-02-2025 ರಿಂದ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಆಯೋಗದ ವೆಬ್ ಸೈಟ್ http://kpsc.kar.nic.in ರ ಮೂಲಕ ಡೌನ್ ಮಾಡಿಕೊಳ್ಳಬಹುದು.


ಪ್ರಮುಖ ದಿನಾಂಕಗಳು :
* ಪತ್ರಾಂಕಿತ ವ್ಯವಸ್ಥಾಪಕರು/ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪರೀಕ್ಷೆ: 02-03-2025
* ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ-1) ಪರೀಕ್ಷೆ: 04-03-2025
* ಪ್ರವೇಶ ಪತ್ರ ಡೌನ್‌ಲೋಡ್ ಪ್ರಾರಂಭ ದಿನಾಂಕ: 21-02-2025


ಅಭ್ಯರ್ಥಿಗಳಿಗೆ ಸೂಚನೆ :
- ಪರೀಕ್ಷಾ ಸ್ಥಳ, ಸಮಯ ಹಾಗೂ ಬೆಳವಣಿಗೆಯ ಕುರಿತು ಮಾಹಿತಿಯನ್ನು ಪ್ರವೇಶ ಪತ್ರದಲ್ಲಿ ನೀಡಲಾಗುವುದು.  
- ಪ್ರವೇಶ ಪತ್ರ ಮತ್ತು ಮಾನ್ಯ ಗುರುತಿನ ಚೀಟಿಯನ್ನು ಪರೀಕ್ಷಾ ದಿನಕ್ಕೆ ತರುವುದು ಕಡ್ಡಾಯ.  
- ಯಾವುದೇ ಪ್ರಶ್ನೆಗಳಿಗಾಗಿ ಆಯೋಗದ ವೆಬ್‌ಸೈಟ್ ಸಂಪರ್ಕಿಸಬಹುದು.  


* ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಪ್ರವೇಶ ಪಾತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

Comments