ಕರ್ನಾಟಕ ಲೋಕಸೇವಾ ಆಯೋಗವು (KPSC) ದಿನಾಂಕ: 14.10.2022 ರಂದು ಅಧಿಸೂಚಿಸಿದ ಜಲ ಸಂಪನ್ಮೂಲ ಇಲಾಖೆಯಲ್ಲಿ 166 (ಹೈ.ಕ) ಗ್ರೂಪ್ 'ಸಿ' ವರ್ಗದ ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮ 2022ರನ್ವಯ ತಿದ್ದುಪಡಿ ಪಟ್ಟಿಗಳನ್ನು ಸಿದ್ಧಪಡಿಸಲಾಗಿದ್ದು, ಈಗ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.
ಹುದ್ದೆ ವಿವರ :
- ಹುದ್ದೆಯ ಹೆಸರು : ಕಿರಿಯ ಇಂಜಿನಿಯರ್ (ಸಿವಿಲ್)
- ಹುದ್ದೆಗಳ ಸಂಖ್ಯೆ : 166 (ಹೈ.ಕ)
- ನೇಮಕಾತಿ ಪ್ರಾಧಿಕಾರ : ಮುಖ್ಯ ಇಂಜಿನಿಯರ್
- ಇಲಾಖೆ : ಜಲ ಸಂಪನ್ಮೂಲ ಇಲಾಖೆ
ಆಯ್ಕೆ ಪ್ರಕ್ರಿಯೆ :
ಅಂತಿಮ ಆಯ್ಕೆ ಪಟ್ಟಿಯನ್ನು ದಿನಾಂಕ: 31-01-2024, 16-04-2024, ಮತ್ತು 08-08-2024 ರಂದು ಪ್ರಕಟಿಸಿದ್ದ ಮೂಲ ಮತ್ತು ಹೆಚ್ಚುವರಿ ಆಯ್ಕೆಪಟ್ಟಿಗಳನ್ನು ಪರಿಶೀಲಿಸಿ, ಈಗ ಇಲಾಖೆಯ ಬೇಡಿಕೆಯಂತೆ ಮತ್ತೊಂದು ಹೆಚ್ಚುವರಿ ಆಯ್ಕೆಪಟ್ಟಿಯನ್ನು ನಿಯಮಾನುಸಾರ ಸಿದ್ಧಪಡಿಸಿ ಪ್ರಕಟಿಸಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗವು (KPSC) ದಿನಾಂಕ: 22.04.2022 ರಂದು ಅಧಿಸೂಚಿಸಿದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ 50+10 (ಹೈ.ಕ) ವೃಂದದ ಸಹಾಯಕ ನಗರ ಯೋಜಕರು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು.
ಈ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು 20-03-2024 ರಂದು ಪ್ರಕಟಿಸಲಾಗಿತ್ತು. ನಿಯಮಾನುಸಾರ ಸಿದ್ಧಪಡಿಸಿರುವ ಈ ಹೆಚ್ಚುವರಿ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಹುದ್ದೆಯ ವಿವರ :
- ಹುದ್ದೆ ಹೆಸರು : ಸಹಾಯಕ ನಗರ ಯೋಜಕರು
- ಒಟ್ಟು ಹುದ್ದೆಗಳ ಸಂಖ್ಯೆ : 50+10 (ಹೈ.ಕ)
- ಇಲಾಖೆ : ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ
- ನೇಮಕಾತಿ ಪ್ರಾಧಿಕಾರ : ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ
ಹೆಚ್ಚುವರಿ ಆಯ್ಕೆಪಟ್ಟಿ ವಿವರ :
ಈ ಹೆಚ್ಚುವರಿ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತಕ್ಷಣವೇ ನೇಮಕಾತಿಗೆ ಅರ್ಹರಾಗುವುದಿಲ್ಲ. ಆಯೋಗದಿಂದ ಮಾತ್ರ ಆಯ್ಕೆ ದೃಢೀಕರಿಸಲಾಗುತ್ತದೆ. ನೇಮಕಾತಿ ಪ್ರಾಧಿಕಾರದ ಅನುಮೋದನೆಯೊಂದಿಗೆ ಮಾತ್ರ ಖಾಲಿ ಹುದ್ದೆಗಳಿಗೆ (ನಮೂನೆ-7 ಪ್ರಕಾರ) ಹೆಚ್ಚುವರಿ ಆಯ್ಕೆಪಟ್ಟಿಯಿಂದ ನೇಮಕಾತಿ ಪ್ರಕ್ರಿಯೆ ಮುಂದುವರಿಯುತ್ತದೆ.
ಪ್ರಮುಖ ಸೂಚನೆ :
- ಹೆಚ್ಚುವರಿ ಪಟ್ಟಿಯಲ್ಲಿ ಹೆಸರು ಬಂದಿದ್ದರೆ ಮಾತ್ರ ವಾಸ್ತವದಲ್ಲಿನ ನೇಮಕಾತಿಗೆ ಖಾತರಿ ನೀಡುವುದಿಲ್ಲ.
- ಭರ್ತಿಯಾಗದ ಹುದ್ದೆಗಳ ಪ್ರಮಾಣದ ಪ್ರಕಾರ ಮಾತ್ರ ಹೆಚ್ಚುವರಿ ಆಯ್ಕೆಪಟ್ಟಿ ಬಳಕೆಯಾಗುತ್ತದೆ.
ಮುಖ್ಯ ಅಂಶಗಳು :
- ಅಭ್ಯರ್ಥಿಗಳು ತಮ್ಮ ಹೆಸರುಗಳು ಆಯ್ಕೆ ಪಟ್ಟಿಯಲ್ಲಿ ಸೇರಿರೋದನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ವೆಬ್‌ಸೈಟ್ ಅನ್ನು ಭೇಟಿಕೊಡಬಹುದು.
- ಹೆಚ್ಚಿನ ಮಾಹಿತಿಗಾಗಿ ಜಲ ಸಂಪನ್ಮೂಲ ಇಲಾಖೆಯ ಮತ್ತು KPSC ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪರಿಶೀಲಿಸಬಹುದು.
ಆಸಕ್ತ ಮತ್ತು ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನೆಗಳು! ಸರ್ಕಾರದ ಸೇವೆಯಲ್ಲಿ ತಮ್ಮ ವೃತ್ತಿಜೀವನವನ್ನು ನಿರ್ಮಿಸಲು ಇದು ದೊಡ್ಡ ಅವಕಾಶವಾಗಿದೆ.
To Download Official Announcement
KPSC Selection List 2025 PDF Download
KPSC Rank List 2025
KPSC Exam Results 2025
How to Check KPSC Additional Selection List 2025
KPSC Additional List 2025 Cut-off Marks
KPSC Selection Process 2025
Comments