ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL)ದಲ್ಲಿನ ವಿವಿಧ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಇದೀಗ ಪ್ರಕಟ
Published by: Yallamma G | Date:20 ಮಾರ್ಚ್ 2025
Image not found

             ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ವು 622 ಎಇ, ಜೆಇ (ವಿವಿಧ ವಿಭಾಗಗಳಲ್ಲಿನ), ಕೆಮಿಸ್ಟ್ ಮತ್ತು ಕೆಮಿಕಲ್ ಸೂಪರ್‌ವೈಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎರಡು ಅವಧಿಗಳಲ್ಲಿ ದಿನಾಂಕ 18-02-2024 ರಂದು ನಡೆಸಲಾಗಿದೆ. 


         ಸದರಿ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು 17-04-2024 ರಂದು ಪ್ರಕಟಿಸಲಾಗಿದೆ. ಹುದ್ದೆವಾರು ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ದಿನಾಂಕ 03-05-2024 ರಂದು ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಹುದ್ದೆವಾರು ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂತಿಮ ಅಂಕ ಪಟ್ಟಿಯನ್ನು ಕೂಡ ಪ್ರಕಟಿಸಲಾಗಿದತ್ತು. ಇದೀಗ ಕೆಪಿಸಿಎಲ್ ಸಂಸ್ಥೆಯಿಂದ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.  


     ಈ ಕೆಳಗೆ ನೀಡಿರುವ ಅಧಿಸೂಚನೆ ಮೂಲಕ ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Comments