ಭಾರತ ಸರ್ಕಾರದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿನದ ನಿರುದ್ಯೋಗಿ ಯುವಕ/ಯುವತಿ/ಮಹಿಳೆ/ಎನ್.ಜೆ.ಓ/ಎಸ್.ಹೆಚ್.ಜಿ.ಗಳಿಗೆ ಸ್ವಉದ್ಯೋಗ ಕಲ್ಪಿಸುವ ತರಬೇತಿ ಕಾರ್ಯಕ್ರಮಕ್ಕಾಗಿ ಕಡಿಮೆ ಶುಲ್ಕದೊಂದಿಗೆ ಅರ್ಜಿ ಕರೆಯಲಾಗಿದ್ದು, ವಿವಿಧ ಕುಶಲತೆಗಳ ತರಬೆತಿ ಕೇಂದ್ರ (ಎಂ.ಡಿ.ಟಿ.ಸಿ), ಖಾದಿ ಗ್ರಾಮೋದ್ಯೋಗ ಆಯೋಗ(ಕೆವಿಐಸಿ), ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂ.ಎಸ್.ಎಂ.ಇ) ದಿಂದ ತರಬೇತಿಯನ್ನು ನೀಡಲಾಗುತ್ತದೆ.
ಟೈಲರಿಂಗ್ ಮತ್ತು ಎಂಬ್ರಾಯಿಡರಿ, ಬ್ಯೂಟಿಷಿಯನ್ ತರಬೇತಿ, ಕಂಪ್ಯೂಟರ್ ಬೇಸಿಕ್ ತರಬೇತಿ, ಬೇಸಿಕ್ ಬೇಕರಿ ತರಬೇತಿ, ಕಾಗದದ ವಸ್ತುಗಳ ತಯಾರಿಕೆ, ಹಣ್ಣು ಮತ್ತು ತರಕಾರಿ ಸಂಸ್ಕರಣೆ, ಗೃಹೋಪಯೋಗಿ ಕೆಮಿಕಲ್ ವಸ್ತುಗಳು ತರಬೇತಿ, ಖಾದಿ ಪರಿಸರಸ್ನೇಹಿ ಬಣ್ಣ ತಯಾರಿಕೆ ಮತ್ತು ಬೇಸಿಕ್ ಜೇನು ಸಾಕಾಣಿಕೆ ಸೇರಿದಂತೆ ವಿವಿಧ ಉದ್ಯೋಗಗಳಿಗೆ ತರಬೇತಿ ನೀಡಲಾಗುತ್ತದೆ. ಉದ್ಯೋಗಗಳಿಗೆ ಅನುಗುಣವಾಗಿ ತರಬೇತಿಯ ಅವಧಿಯನ್ನು 3 ತಿಂಗಳಿನಿಂದ 10 ತಿಂಗಳ ವರೆಗೆ ನಿಗದಿಪಡಿಸಲಾಗಿದೆ. ಉದ್ಯೋಗಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು 300/- ರಿಂದ 1000/- ರೂಗಳವರೆಗೆ ನಿಗದಿಪಡಿಸಲಾಗಿದೆ.
ಎಂ.ಡಿ.ಟಿ.ಸಿ, ಕೆ.ವಿ.ಐ.ಸಿ. ವಿಜಿನಪುರ, ಹೆಗ್ಗನಹಳ್ಳಿ ಬೆಂಗಳೂರು, ಮಾರ್ಗೊಂಡನಹಳ್ಳಿ, ಬೆಂಗಳೂರು, ದೇವರಾಜ ಮೈಸೂರು ಮತ್ತು ಶ್ರೀನಿವಾಸಪುರ ಮೈಸೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಂದರ್ಶನವನ್ನು ನಡೆಸಲಾಗಿತ್ತದೆ.
ಇತರೆ ಕಸುಬುಗಳ ಕರಕುಶಲ ತರಬೇತಿಯನ್ನು ಸಹ ನೀಡಲಾಗುತ್ತದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ದೂರವಾಣಿ 080-25650285, 9449354126, 8299377420 ಸಂಪರ್ಕಿಸಿ ಮಾಹಿತಿ ಪಡೆಯಬಹುದು. ತರಬೇತಿ ಪೂರ್ತಿಗೊಳಿಸಿದ ಅಭ್ಯರ್ಥಿಗಳಿಗೆ ಭಾರತ ಸರ್ಕಾರದಿಂದ ಪಿ.ಎಂ.ಇ.ಜಿ.ಪಿ. ಯೋಜನೆಯಡಿಯಲ್ಲಿ 15% ರಿಂದ 35% ರಷ್ಟು ಸಹಾಯಧನದೊಂದಿಗೆ ತಮ್ಮ ಯೋಜನೆಗಳನ್ನು ಪ್ರಾರಂಬಿಸಲು ರೂ. 25 ಲಕ್ಷದಿಂದ ರೂ. 50 ಲಕ್ಷಗಳವರೆಗೆ ಯೋಜನಾ ವೆಚ್ಚ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: www.kvic.org.in.
Comments