ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBCWWB) ಯಲ್ಲಿನ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಇದೀಗ ಪ್ರಕಟ
Published by: Yallamma G | Date:7 ಫೆಬ್ರುವರಿ 2025
Image not found

ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBCWWB) ಯಲ್ಲಿನ ಖಾಲಿ ಇರುವ ಕಲ್ಯಾಣ ಅಧಿಕಾರಿಗಳ 12 ಹುದ್ದೆಗಳು (ಉ.ಮೂ ವೃಂದ-9 ಮತ್ತು ಹೈ.ಕ-03 ಹುದ್ದೆಗಳು), ಕ್ಷೇತ್ರ ನಿರೀಕ್ಷಕರು 60 ಹುದ್ದೆಗಳು (ಉ.ಮೂ ವೃಂದ-45 ಮತ್ತು ಹೈ.ಕ-15 ಹುದ್ದೆಗಳು),  ಪ್ರಥಮ ದರ್ಜೆ ಸಹಾಯಕರು 12 ಹುದ್ದೆಗಳು (ಉ.ಮೂ ವೃಂದ-08 ಮತ್ತು ಹೈ.ಕ-04 ಹುದ್ದೆಗಳು) ಮತ್ತು ದ್ವಿತೀಯ ದರ್ಜೆ ಸಹಾಯಕರು 100 ಹುದ್ದೆಗಳು (ಉ.ಮೂ ವೃಂದ-64 ಮತ್ತು ಹೈ.ಕ-36 ಹುದ್ದೆಗಳು) ಸೇರಿ ಒಟ್ಟು 186 ಹುದ್ದೆಗಳ ನೇಮಕಾತಿಗಾಗಿ 27-06-2023 ರಂದು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನೂ ಆಹ್ವಾನಿಸಲಾಗಿತ್ತು. 


              ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿದೆ. ಕಾಲಕಾಲಕ್ಕೆ ತಿದ್ದುಪಡಿಯಾದ ನಾಗರೀಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ಹಾಗೂ ತಿದ್ದುಪಡಿ ನಿಯಮ 2022ರ ಅನ್ವಯ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿದೆ. 


                  ಈ ತಾತ್ಕಾಲಿಕ ಪಟ್ಟಿಗೆ ಸಂಬಂಧಿಸಿದಂತೆ ಯಾವುದಾದರು ಆಕ್ಷೇಪಣೆಗಳಿದ್ದಲ್ಲಿ ಈ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ 15 ದಿನಗಳೊಳಗಾಗಿ ಅಂದರೆ ದಿನಾಂಕ:21-02-2025ರ ಸಂಜೆ 5-30 ಗಂಟೆಯೊಳಗೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿರುತ್ತದೆ.
ಆಕ್ಷೇಪಣೆಯನ್ನು ಸಲ್ಲಿಸುವ ವಿಳಸ : ಜಂಟಿ ಕಾರ್ಯದರ್ಶಿಗಳು ಹಾಗೂ ಸದಸ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ ಕ.ಕ.&ಇ.ನಿ.ಕಾ.ಕ.ಮಂಡಳಿ.

Comments

*