KPSCಯಿಂದ ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಮುಖ್ಯ ಪರೀಕ್ಷೆಯ ಹೊಸ ದಿನಾಂಕ ಪ್ರಕಟ | ಈ ಕುರಿತು ಮಾಹಿತಿ ನಿಮಗಾಗಿ
Published by: Bhagya R K | Date:27 ಮಾರ್ಚ್ 2025
Image not found

ಕರ್ನಾಟಕ ಲೋಕಸೇವಾ ಆಯೋಗ (KPSC) 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗೆ ಅಧಿಸೂಚನೆಗಳನ್ನು ಪ್ರಕಟಿಸಿದ್ದವು.


           ಗೆಜೆಟೆಡ್ ಪ್ರೊಬೇಷನ‌ರ್ (KAS) ಹುದ್ದೆಗಳ ಮುಖ್ಯ ಪರೀಕ್ಷೆಯ ಹೊಸ ದಿನಾಂಕವನ್ನು ಪ್ರಕಟಿಸಲಾಗಿದೆ. ಮೊದಲು ಮುಂದೂಡಲಾಗಿದ್ದ ಈ ಪರೀಕ್ಷೆಯನ್ನು ಈಗ 2025 ಮೇ 03 ರಿಂದ ಮೇ 09ರವರೆಗೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.


ಪ್ರಾಥಮಿಕ ಅಧಿಸೂಚನೆ :  
- ದಿನಾಂಕ: 26-02-2024  
- ಮುಖ್ಯ ಪರೀಕ್ಷೆಯ ಪೂರ್ವ ಅಧಿಸೂಚನೆ: 13-02-2025  


ಮುಂದೂಡಲಾದ ಮುಖ್ಯ ಪರೀಕ್ಷೆಯ ಹೊಸ ವೇಳಾಪಟ್ಟಿ :  
ಮೊದಲಿಗೆ 28-03-2025, 29-03-2025, 01-04-2025 ಮತ್ತು 02-04-2025ರಂದು ನಡೆಸಲು ನಿಗದಿಪಡಿಸಿದ್ದ ಮುಖ್ಯ ಪರೀಕ್ಷೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಈಗ ಈ ಪರೀಕ್ಷೆಯನ್ನು ಮರುನಿಗದಿಪಡಿಸಲಾಗಿದ್ದು, ಹೊಸ ದಿನಾಂಕಗಳು ಈ ಕೆಳಗಿನಂತೆ:


ಪ್ರಸ್ತುತ ಪರೀಕ್ಷಾ ದಿನಾಂಕಗಳು :
- 03-05-2025 
- 05-05-2025
- 07-05-2025
- 09-05-2025


ಅಭ್ಯರ್ಥಿಗಳು ಈ ಹೊಸ ವೇಳಾಪಟ್ಟಿಯನ್ನು ಗಮನಿಸಿ, ತಯಾರಿ ಮುಂದುವರಿಸಬೇಕು. ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.

Comments