Loading..!

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಯ ಎರಡನೇ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ 58 ಅಭ್ಯರ್ಥಿಗಳಿಗೆ ಹೆಚ್ಚುವರಿ ಅವಕಾಶ
| Date:23 ಆಗಸ್ಟ್ 2019
Image not found
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ದಿನಾಂಕ 10-04-2017 ರಂದು ಸುಮಾರು 240 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿತ್ತು, ವಿವಿಧ ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೊಂಡು ಅಂತಿಮವಾಗಿ ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ದಿನಾಂಕ 03-01-2019 ರಂದು ಪ್ರಕಟಿಸಿತ್ತು.

ಪ್ರಸ್ತುತ ಅರಣ್ಯ ರಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಬಾಕಿ ಇರುವ ಹುದ್ದೆಗಳಿಗೆ ಹೆಚ್ಚುವರಿ ಅಭ್ಯರ್ಥಿಗಳನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಹಾಗೂ ರೋಸ್ಟರ್ ಬಿಂದುಗಳ ಅನುಸಾರ ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳಂತೆ ಪರಿಗಣಿಸಿ ಎರಡನೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಲಾಗಿದೆ.

ಎರಡನೇ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 58 ಅಭ್ಯರ್ಥಿಗಳು ಆಯ್ಕೆ ಹೊಂದಿರುತ್ತಾರೆ ಹಾಗೂ ಈ ಅಭ್ಯರ್ಥಿಗಳಿಗೆ ದಿನಾಂಕ 16-09-2019 ರಂದು ಬೆಳಿಗ್ಗೆ ಹತ್ತು ಗಂಟೆಗೆ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ವೃತ್ತ (ಅರಣ್ಯ ಭವನ, ಅಶೋಕಪುರಂ, ಮೈಸೂರು-570008) ಇವರ ಸಮ್ಮುಖದಲ್ಲಿ ಎಲ್ಲ ದಾಖಲಾತಿಗಳೊಂದಿಗೆ ಮತ್ತು ಇತ್ತೀಚಿನ ಎರಡು ಭಾವಚಿತ್ರದೊಂದಿಗೆ ಹಾಗೂ ಸರ್ಕಾರವು ನಿಗದಿಪಡಿಸಿರುವ ಯಾವುದಾದರೂ ಗುರುತಿನ ಚೀಟಿಯೊಂದಿಗೆ ಖುದ್ದು ಹಾಜರಾಗತಕ್ಕದ್ದು.
ಅಭ್ಯರ್ಥಿಯು ಕಾರಣಾಂತರಗಳಿಂದ ಹಾಜರಾಗದೇ ಇದ್ದ ಪಕ್ಷದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು ಹಾಗೂ ಯಾವುದೇ ಕಾರಣಕ್ಕೂ ಯಾವುದೇ ಸನ್ನಿವೇಶದಲ್ಲೂ ಕಾಲ ಮಿತಿಯನ್ನು ನೀಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಅರಣ್ಯ ಇಲಾಖೆ ಹೊರಡಿಸಿರುವ ಪ್ರಕಟನೆಯನ್ನು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಓದಿ ಕೊಳ್ಳಬಹುದಾಗಿದೆ ಹಾಗೂ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ನೋಡಬಹುದಾಗಿದೆ.
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments